Home Crime ಉಡುಪಿ : ಯುವಕನೊಬ್ಬ ನಾಪತ್ತೆ…!!

ಉಡುಪಿ : ಯುವಕನೊಬ್ಬ ನಾಪತ್ತೆ…!!

ಉಡುಪಿ: ಇಬ್ಬರು ಬಸ್ಸಿನಲ್ಲಿ ಪ್ರಯಾಣಿಸಿತ್ತಿರುವಾಗ ಅದರಲ್ಲಿ ಒಬ್ಬರು ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವಕ ಸಾಮೀಲ್ ಮುರ್ಮು ಎಂದು ತಿಳಿದು ಬಂದಿದೆ.

ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಅಜಿತ ಹೇರಂಭ (29), ಬಿಹಾರ್ ಹಾಗೂ ಜಾರ್ಖಂಡ್‌ ಮೂಲದ ಸಾಮೀಲ್‌ ಮುರ್ಮು (28) ರವರು ಉಡುಪಿ ಜಿಲ್ಲೆ ಕುಂದಾಫುರ ತಾಲೂಕು ಜಪ್ತಿ ಗ್ರಾಮದ ಶ್ರೀ ಕೃಷ್ಣ ಕೃಪಾ ಕ್ಯಾಶೂಸ್‌ ಪ್ರೈವೇಟ್‌ ಲಿಮಿಟೆಡ್‌ ನಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ಜಾರ್ಖಂಡ್‌ ಮೂಲದ ಪೌಲ್‌ ಎಂಬಾತನು ಕಾರ್ಕಳದಲ್ಲಿ ಕೂಲಿ ಕೆಲಸಮಾಡಿಕೊಂಡಿದ್ದು, ಆತನು ಅಸೌಖ್ಯದಿಂದ ಬಳಲುತ್ತಿದ್ದು ಆತನನ್ನು ನೋಡಲು ಪಿರ್ಯಾದಿದಾರರು ಹಾಗೂ ಸಾಮೀಲ್‌ ಮುರ್ಮು ರವರು ದಿನಾಂಕ 06/07/2025 ರಂದು ಬೆಳಿಗ್ಗೆ 8:00 ಗಂಟೆಗೆ ಕುಂದಾಪುರದಿಂದ ಹೊರಟು ಉಡುಪಿಯ ಮೂಲಕ ಕಾರ್ಕಳ ತಲುಪಿ ಪೌಲ್‌ ರವರನ್ನು ವಿಚಾರಿಸಿ ಅದೇ ದಿನ ಸಂಜೆ 4:00 ಗಂಟೆಗೆ ಪಿರ್ಯಾದಿದಾರರು ಹಾಗೂ ಸಾಮೀಲ್‌ ರವರು ಉಡುಪಿ ಬಸ್ಸಿನಲ್ಲಿ ಒಂದೇ ಬದಿಯ ಸೀಟಿನಲ್ಲಿ ಕುಳಿತಿದ್ದು, ಪಿರ್ಯಾದಿದಾರರಿಗೆ ಕಾರ್ಕಳದ ಮುಂದೆ ಕುಕ್ಕುಂದೂರು ಎಂಬಲ್ಲಿ ನಿದ್ದೆ ಬಂದಿದ್ದರಿಂದ ಬಸ್ಸಿನ ಸೀಟಿನಲ್ಲಿಯೇ ಮಲಗಿದ್ದು, ಬಸ್ಸು ಬೈಲೂರನ್ನು ತಲುಪಿದಾಗ ಪಿರ್ಯಾದಿದಾರರು ನಿದ್ದೆಯಿಂದ ಎಚ್ಚರಗೊಂಡಾಗ ಸಾಮೀಲ್‌ ಮುರ್ಮು ರವರು ಪಕ್ಕದ ಸೀಟಿನಲ್ಲಿ ಇಲ್ಲದೇ ಇದ್ದು ಕಾಣೆಯಾಗಿರುತ್ತಾರೆ.

ಘಟನಾ ಸ್ಥಳವು ಕಾರ್ಕಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುವುದರಿಂದ ಉಡುಪಿ ನಗರ ಪೊಲೀಸ್‌ ಠಾಣೆ ZERO FIR ನಂಬ್ರ 001/2025 ಕಲಂ: ಗಂಡಸು ಕಾಣೆ ರಂತೆ ಪ್ರಕರಣ ದಾಖಲಾಗಿರುವುದಾಗಿದೆ