ಉಡುಪಿ ಮೂಲದ ಯುವಕ ಸೇರಿದಂತೆ ಇಬ್ಬರು ಸಾವು…
ಶಿವಮೊಗ್ಗ: ನಗರದ ಸಮೀಪ ನಂದಿನಿ ಹಾಲು ಸಾಗಾಟ ವಾಹನ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾವನ್ನಪ್ಪಿದ ವಿದ್ಯಾರ್ಥಿಗಳು ಉಡುಪಿಯ ನಿವಾಸಿ ಆದಿತ್ಯ ಹಾಗು ದಾವಣಗೆರೆ ನಿವಾಸಿ ಸಂದೀಪ್ ಎಂದು ತಿಳಿದು ಬಂದಿದೆ.
ಈ ಘಟನೆ ಸ್ಥಳಕ್ಕೆ ಶಿವಮೊಗ್ಗ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.