ಉಡುಪಿ: ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ವಿದ್ಯಾಭ್ಯಾಸದ ಜೊತೆಗೆ ಕಠಿಣ ಪರಿಶ್ರಮದಿಂದ ಹಗಲಿರುಳು ಓದಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಪರೀಕ್ಷಾ ಸಿಬ್ಬಂದಿಗಳ ವಸ್ತ್ರ ಸಂಹಿತೆಯ ನೆಪದಲ್ಲಿ ಜನಿವಾರ ತೆಗೆಸಿ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಮಯದಲ್ಲಿ ಮಾನಸಿಕ ಆಘಾತ ಉಂಟಾಗುವಂತೆ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದ ಪರೀಕ್ಷಾ ಸಿಬ್ಬಂದಿಯ ವರ್ತನೆಯಿಂದ ಸಮಾಜದ ಒಂದು ವರ್ಗಕ್ಕೆ ತಾರತಮ್ಯ ಮಾಡಿರುವುದು ಅತ್ಯಂತ ನೋವಿನ ವಿಷಯ. ಆ ರೀತಿ ವರ್ತಿಸಿದ ಪರೀಕ್ಷಾ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ನೊಂದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯುವ ಅವಕಾಶ ಮಾಡಿಕೊಡಬೇಕೆಂದು ಪ್ರವೀಣ್ ಎಂ ಪೂಜಾರಿ ಜಿಲ್ಲಾಧ್ಯಕ್ಷರು ಉಡಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಇವರು ಸರಕಾರಕ್ಕೆ ಆಗ್ರಹಿಸಿದ್ದಾರೆ.
Home Karavali Karnataka ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆದ ಸಿಇಟಿ ಪರೀಕ್ಷೆಯ ಕೇಂದ್ರದಲ್ಲಿ ವಸ್ತ್ರ ಸಂಹಿತೆ ನೆಪದಲ್ಲಿ ಜನಿವಾರ...