Home Crime ಕಾರ್ಕಳ : ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣು…!!

ಕಾರ್ಕಳ : ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣು…!!

ಕಾರ್ಕಳ: ನಗರದ ಸಮೀಪ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡವರು ಮಂಜುನಾಥ ಎಂದು ತಿಳಿಯಲಾಗಿದೆ.

ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದುದಾರ ಸಂಪತ್‌ (27) ಕಾನಾಂಗಿ ಹಿರ್ಗಾನ ಗ್ರಾಮ ಇವರ ತಂದೆ: ಮಂಜುನಾಥ ಎಂಬವರು ಹಿರ್ಗಾನ ಗ್ರಾಮದ ಕಾನಾಂಗಿ ಎಂಬಲ್ಲಿ ವಾಸವಾಗಿದ್ದು ಇವರಿಗೆ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನುಪಡೆದುಕೊಳ್ಳುತ್ತಿದ್ದು ಇದೇ ಕಾರಣದಿಂದ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ:19/08/2025 ರಂದು ಸಂಜೆ 06:00 ಗಂಟೆಯಿಂದ ಸಂಜೆ 07:00 ಗಂಟೆಯ ಮದ್ಯಾವದಿಯಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಸ್ವಾಗತ್‌ ವೈನ್ಸ್‌ ನ ಪಕ್ಕದ ಹೇಮಾವತಿ ಮಾಲೀಕತ್ವದ ಬಿಲ್ಡಿಂಗ್‌ ನ ಕೋಣೆಯಲ್ಲಿ ವಿದ್ಯುತ್‌ ವೈರ್‌ ನ್ನು ಬಳಸಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 36/2025 ಕಲಂ 194 ರಂತೆ ಪ್ರಕರಣ ದಾಖಲಿಸಿರುವುದಾಗಿದೆ.