Home Crime ಕೊಲ್ಲೂರು : ಕುತ್ತಿಗೆಗೆ ನೇಣು ಹಾಕಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ…!!

ಕೊಲ್ಲೂರು : ಕುತ್ತಿಗೆಗೆ ನೇಣು ಹಾಕಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ…!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ವ್ಯಕ್ತಿಯೊಬ್ಬ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮುದೂರು ಗ್ರಾಮದ ನಿವಾಸಿ ರಮೇಶ್ ಎಂದು ತಿಳಿದು ಬಂದಿದೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರ ಸುರೇಶ್ (4೦) ಮುದೂರು ಗ್ರಾಮ ಎಂಬವರು ಅತ್ತೆಯ ಮಗನಾದ ರಮೇಶನು ತನ್ನ ತಾಯಿ ಹಾಗೂ ಸಹೋದರಿಯೊಂದಿಗೆ ವಿಳಾಸದಲ್ಲಿ ವಾಸವಿದ್ದು, ರಮೇಶ ಹಾಗೂ ಸಹೋದರಿ ಶಾಂತಾಳು ಇರುಳುಗಣ್ಣು ಸಮಸ್ಯೆಯಿಂದ ಬಳಲುತ್ತಿದ್ದು ಇಬ್ಬರೂ ಮನೆಯಲ್ಲಿಯೇ ವಾಸವಿದ್ದು ತಾಯಿ ಚಿಕ್ಕು ಕೂಲಿ ಕೆಲಸ ಮಾಡುತ್ತಿರುವುದಾಗಿದೆ. ಈ ದಿನ ದಿನಾಂಕ : 19/08/2025 ರಂದು ಸಮಯ ಸುಮಾರು ಮದ್ಯಾಹ್ನ 03:00 ಗಂಟೆಗೆ ಮೃತರ ತಾಯಿ ಕೂಲಿ ಕೆಲಸ ಮುಗಿಸಿಕೊಂಡು ವಾಪಾಸು ಮನೆಗೆ ಬಂದಾಗ ಮನೆಯ ಹಟ್ಟಿಯ ಬಳಿಗೆ ಹೋಗಿ ನೋಡಲಾಗಿ ಮಗ ರಮೇಶನು ಹಟ್ಟಿಯ ಜಂತಿಗೆ ರೋಪ್ ಹಗ್ಗದ ಒಂದು ಬದಿಯನ್ನು ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತ ರಮೇಶನು ತನಗಿರುವ ಇರುಳುಗಣ್ಣು ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ : 19/08/2025ರಂದು ಮಧ್ಯಾಹ್ನ 02:00 ಗಂಟೆಯಿಂದ 03:00 ಗಂಟೆಯ ನಡುವೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 18/2025 ಕಲಂ: 194 BNSS ರಂತೆ ಪ್ರಕರಣ ದಾಖಲಿಸಿರುವುದಾಗಿದೆ.