ಕುಂದಾಪುರ : ಶಾಸಕರ ವೈಫಲ್ಯದ ಬಗ್ಗೆ ನಾನು ಹೇಳಿದ್ದಕ್ಕೆ ಶಾಸಕರು ನನ್ನ ಪ್ರಶ್ನೆಗೆ ಉತ್ತರ ನೀಡುವುದನ್ನು ಬಿಟ್ಟು ಅವರನ್ನು ಆಯ್ಕೆ ಮಾಡಿದ ಮತದಾರರ ಗಮನವನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಿದ್ದಾರೆ.
ಕುಂದಾಪುರ ಶಾಸಕರು ಗೇರ್ ಲೀಸ್ ಅಲ್ಲಿ ಭೂ ಮಂಜೂರಾತಿ ಮಾಡಿ ಕೊಂಡರೆ ಅದು ಅವರ ಹಕ್ಕು ಅದನ್ನು ವಿರೋಧಿಸುವ ಅಧಿಕಾರ ನನಗೆ ಇಲ್ಲಾ ಎನ್ನುವ ಸಾಮಾನ್ಯ ಅರಿವು ನನಗಿದೆ, ರಾಜಕೀಯವಾಗಿ ಶಾಸಕರನ್ನು ಟೀಕಿಸುವ ಹಕ್ಕು ಒಂದು ಜಿಲ್ಲಾ ಕಾಂಗ್ರೆಸ್ ವಕ್ತಾರನಾಗಿ ನನಗಿದೆ. ಆದರೆ ಶಾಸಕರಿಗೆ ನನ್ನ ಪ್ರಶ್ನೆ ಇವತ್ತು ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಸುಮಾರು 10,000 ಕ್ಕೂ ಮಿಕ್ಕಿ ಅರ್ಜಿಗಳು ತಿರಸ್ಕಾರವಾಗಿದೆ ಇದು ಶಾಸಕರ ವೈಫಲ್ಯದಿಂದಲೇ ಆದದ್ದು, ಅಕ್ರಮ-ಸಕ್ರಮದ ಅರ್ಜಿ ನಮೂನೆ 50, 53 ಹಾಗೂ 57 ಮಾತ್ರ ಅಕ್ರಮ-ಸಕ್ರಮ ಸಮಿತಿ ಮುಂದೆ ಬರುವುದು ಆದರೆ ಅರ್ಜಿ ನಮೂನೆ 94 ಸಿ, 94 ಸಿ ಸಿ ಹಾಗೂ 94 ಡಿ ಶಾಸಕರು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಮಂಜೂರು ಆಗುವುದು ಹಾಗೂ ತಿರಸ್ಕಾರವಾಗುವುದು.
ಶಾಸಕರು ತಿರಸ್ಕಾರದ ಅರ್ಜಿಗಳ ಬಗ್ಗೆ ಉತ್ತರ ನೀಡಬೇಕು ಇದು ಅವರ ಉತ್ತರದಾಯಿತ್ವ ಕೂಡ. ಇನ್ನು ವಿರೋಧ ಪಕ್ಷದವನಾಗಿ ಶಾಸಕರ ಹಾಗೂ ಬಿಜೆಪಿ ಪಕ್ಷದ ವೈಫಲ್ಯಗಳನ್ನು ಜನಸಾಮಾನ್ಯರ ಮುಂದೆ ಇಡುವ ನನಗೆ ಮುಂದೆ ಟೀಕಿಸಿದರೆ ಉತ್ತರ ಕೊಡುತ್ತೇವೆ ಎನ್ನುವ ಸವಾಲು ಹಾಕುವ ಮೊದಲು ಶಾಸಕರು ಅವರ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹ ಮಾಡಿದ್ದಾರೆ.
