Home Karnataka News ಮಂಟಪದಿಂದ ವಧು ನಾಪತ್ತೆ : ಎಂಬಿಬಿಎಸ್‌ ವಿದ್ಯಾರ್ಥಿಗೆ ಜೊತೆ ಪರಾರಿ ಶಂಕೆ…!!

ಮಂಟಪದಿಂದ ವಧು ನಾಪತ್ತೆ : ಎಂಬಿಬಿಎಸ್‌ ವಿದ್ಯಾರ್ಥಿಗೆ ಜೊತೆ ಪರಾರಿ ಶಂಕೆ…!!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮದುವೆಗೆ ಮೊದಲೇ ಯುವತಿ ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ.

ಶಿರಸಿ ಪಟ್ಟಣದ ಮುಸ್ಲಿಂ ಗಲ್ಲಿಯ ನಿವಾಸಿಯಾದ ಸಿಫಾ (25) ಎಂಬಾಕೆ ತನಗೆ ನಿಶ್ಚಯಗೊಂಡ ಮದುವೆಗೆ ಕೆಲವೇ ಗಂಟೆಗಳು ಇರುವ ಮೊದಲು ನಾಪತ್ತೆಯಾಗಿದ್ದಾಳೆ.

ಮಾಹಿತಿಯ ಅನುಸಾರ, ಸಿಫಾ ಎಂಬಿಬಿಎಸ್‌ ಓದುತ್ತಿರುವ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದು, ಈ ಸಂಬಂಧವನ್ನು ಪಾಲಕರು ಒಪ್ಪದ ಕಾರಣ ಶಿರಸಿಯ ಅಬ್ರಾರ್‌ ಎನ್ನುವಾತನ ಜೊತೆ ಮದುವೆ ನಿಶ್ಚಯ ಮಾಡಿದ್ದರು.

ಇಂದು ಬೆಳಿಗ್ಗೆ ಶಿರಸಿಯ ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮದುವೆ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಸಿಫಾ ಬೆಳ್ಳಂಬೆಳಿಗ್ಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಇದರಿಂದ ಕುಟುಂಬದವರು ಆಘಾತಗೊಂಡಿದ್ದಾರೆ.

ಮದುವೆಗೆಂದು ಕ್ವಿಂಟಲ್‌ಗಟ್ಟಲೆ ಮಟನ್‌ ಹಾಗೂ ಚಿಕನ್‌ ಸಿದ್ಧಪಡಿಸಲಾಗಿದ್ದರೂ ಮದುವೆ ರದ್ದುಗೊಂಡ ಕಾರಣ ಅವೆಲ್ಲವೂ ವ್ಯರ್ಥವಾಗಿದೆ. ಸಿಫಾ ಅವರ ತಂದೆ ಝಹೀರ್ ಖಾನ್ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವತಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.