Home Crime ಕಾರ್ಕಳ : ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಶಿವಮೊಗ್ಗದಲ್ಲಿ ಬಂಧನ..!!

ಕಾರ್ಕಳ : ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಶಿವಮೊಗ್ಗದಲ್ಲಿ ಬಂಧನ..!!

ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ನಗರ ಠಾಣೆಯ ಪ್ರಕರಣದಲ್ಲಿ ಆರೋಪಿಯಾಗಿರುವ ಇಬ್ರಾಹಿಂ ಯಾನೆ @ ಇಬ್ಬು ಎಂಬುವವನು ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದನು.

ಕಾರ್ಕಳ ನಗರ ಠಾಣೆಯ ವಾರಂಟ್ ಸಿಬ್ಬಂದಿಗಳಾದ ಎಚ್‌ಸಿ 2096 ಲೋಕೇಶ್ ಹಾಗೂ ಎಚ್‌ಸಿ 83 ಸಂಜಯ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬಂಧಿಸಿ ಕಾರ್ಕಳಕ್ಕೆ ಕರೆತಂದಿದ್ದಾರೆ.

ಬಂಧಿತನನ್ನು ಕಾರ್ಕಳದ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ (ಜೆಸಿ ಕಸ್ಟಡಿ)ಗೆ ಆದೇಶ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.