ಬೆಂಗಳೂರು: 2026ರ ಸಾಲಿನ ಎಸ್ಎಸ್ಎಲ್ಸಿ (10ನೇ ತರಗತಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಹಲವು ದಿನಗಳ ಗೊಂದಲದ ನಂತರ, ಇಂದು ಏಪ್ರಿಲ್ 23, ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಿಸಿದ್ದಾರೆ.
ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜಾರಾಗಿದ್ದರು.
ಮುಖ್ಯ ಮಾಹಿತಿ:
ಫಲಿತಾಂಶದ ದಿನಾಂಕ: ಏಪ್ರಿಲ್ 23, 2026 ಸಮಯ: ಮಧ್ಯಾಹ್ನ 12:00 ಗಂಟೆಗೆ
ಹಿಂದಿ ಪರೀಕ್ಷೆ ಗೊಂದಲಕ್ಕೆ ತೆರೆ:
ಕಳೆದ ಕೆಲವು ದಿನಗಳಿಂದ ಹಿಂದಿ ವಿಷಯದ ಮೌಲ್ಯಮಾಪನ ಮತ್ತು ಅಂಕಗಳ ಹಂಚಿಕೆ ಬಗ್ಗೆ ಗೊಂದಲ ಉಂಟಾಗಿತ್ತು. ಈ ವಿಚಾರವಾಗಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದ ಸಚಿವರು, ಅಂತಿಮವಾಗಿ ಕೋರ್ಟ್ ಆದೇಶವನ್ನು ಪಾಲಿಸಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಫಲಿತಾಂಶದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.





