Home Karavali Karnataka ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕಿರಿಮಂಜೇಶ್ವರ : ರೂ. 65 ಲಕ್ಷ ಲಾಭ, ಶೇ.17 ಡಿವಿಡೆಂಡ್...

ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕಿರಿಮಂಜೇಶ್ವರ : ರೂ. 65 ಲಕ್ಷ ಲಾಭ, ಶೇ.17 ಡಿವಿಡೆಂಡ್ ಘೋಷಣೆ…!!

ಬೈಂದೂರು : ಕಿರಿಮಂಜೇಶ್ವರ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕಿರಿಮಂಜೇಶ್ವರ ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸಂಸ್ಥೆಯ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಉಡುಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷೀಯ ಮಾತುಗಳನ್ನಾಡಿದ ಶ್ರೀಮತಿ ಅನ್ನಪೂರ್ಣ ಉಡುಪ ಅವರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ರೂ 5494000 ಪಾಲುಬಂಡವಾಳವನ್ನು ಹೊಂದಿದ್ದು ವರ್ಷಾಂತ್ಯಕ್ಕೆ ರೂ.28ಕೋಟಿ 45 ಲಕ್ಷ ಷ್ಟು ಠೇವಣಾತಿಯನ್ನು ಹೊಂದಿದೆ. ವರದಿ ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ ಶೇ.5.53 ರಷ್ಟು ಹೆಚ್ಚಳವಾಗಿದೆ. ವಾರ್ಷಿಕವಾಗಿ ರೂ.101 ಕೋಟಿಗೂ ಅಧಿಕ ವ್ಯವಹಾರ ನಡೆಸಿದೆ.24 ಕೋಟಿ ಸಾಲ ನೀಡಿದೆ. ವರದಿ ವರ್ಷದಲ್ಲಿ ರೂ.65ಲಕ್ಷ ಲಾಭ ಗಳಿಸಿದೆ ಎಂದು ಹೇಳಿದ ಅವರು ಶೇ.17% ಡಿವಿಡೆಂಡ್ ಘೋಷಣೆ ಮಾಡಿದರು.

ಸಂಘವು ಪಡಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದು ರೂ.231000 ವ್ಯಾಪಾರ ಲಾಭ ಗಳಿಸಿದೆ. ಮುದ್ರಣ ವಿಭಾಗದಲ್ಲಿ ರೂ. 57286 ರಷ್ಟು ವ್ಯಾಪಾರ ಲಾಭಗಳಿಸಿದೆ. ಕೃಷಿ ಉತ್ಪನ್ನಗಳ ಮಾರಾಟದಿಂದ ರೂ.453000 ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ಬಿ ತರಗತಿಗೆ ವರ್ಗೀಕರಿಸಲಾಗಿದೆ.

ಸಂಘದ ವ್ಯಾಪ್ತಿಯಲ್ಲಿ 73 ಮಹಿಲಾ ಸ್ವ-ಸಹಾಯ ಗುಂಪುಗಳನ್ನು ರಚಿಸಿದ್ದು ಮಹಿಳಾ ಸಶಕ್ತಿಕರಣಕ್ಕಾಗಿ
ರೂ.2,73,0000 ಸಾಲ ನೀಡಲಾಗಿದೆ. ಕೇವಲ 11% ಬಡ್ಡಿ ದರದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ.

ಸಂಘವು ಪಡಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದು ರೂ.56,121.96 ವ್ಯಾಪಾರ ಲಾಭ ಗಳಿಸಿದೆ. ಮುದ್ರಣ ವಿಭಾಗದಲ್ಲಿ ರೂ. 1.87,026 ರಷ್ಟು ವ್ಯಾಪಾರ ಲಾಭಗಳಿಸಿದೆ. ಕೃಷಿ ಉತ್ಪನ್ನಗಳ ಮಾರಾಟದಿಂದ ರೂ.1,31,050.63 ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ಎ ತರಗತಿಗೆ ವರ್ಗೀಕರಿಸಲಾಗಿದೆ. ಸಂಘದ ವ್ಯಾಪ್ತಿಯಲ್ಲಿ 42 ಮಹಿಲಾ ಸ್ವ-ಸಹಾಯ ಗುಂಪುಗಳನ್ನು ರಚಿಸಿದ್ದು ಮಹಿಳಾ ಸಶಕ್ತಿಕರಣಕ್ಕಾಗಿ ರೂ.2,79,57000 ಸಾಲ ನೀಡಲಾಗಿದೆ. ಕೇವಲ 11% ಬಡ್ಡಿ ದರದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಸಂಘದ ಗ್ರಾಹಕರಿಗಾಗಿ ಇ-ಸ್ಟ್ಯಾಂಪ್‌ ಸೌಲಭ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ. ಸದಸ್ಯರ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎ೦ದು ಹೇಳಿದರು.

ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಗಾಯಿತ್ರಿ ಜಿ ಶ್ಯಾನುಭಾಗ್, ನಿರ್ದೇಶಕರಾದಬಿ. ರತ್ನ ಹೆಬ್ಬಾರ್,ನಾಗವೇಣಿ ಕಾರಂತ,
ಪುಷ್ಪಲತಾ ಶ್ಯಾನುಭೋಗ್,ಶ್ರೀಮತಿ ಶಾರದ,ವಸಂತಿ ಪೂಜಾರಿ,
ಜಯಲಕ್ಷ್ಮೀ ಹೊಳ್ಳ,ಕಮಲಾಕ್ಷಿ ವಿ. ನಾವಡ,ನಾಗವೇಣಿ ಕೆದ್ಲಾಯ,
ರೇಣುಕಾ ನ್ಯಾರಿ, ಸಂಸ್ಥೆಯ ಸರ್ವ ಸದಸ್ಯರು, ಸಿಬ್ಬಂದಿ ವರ್ಗ
ಉಪಸ್ಥಿತರಿದ್ದರು.

ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಗೌರವಿಸಲಾಯಿತು.

ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಕೆ ವರದಿ ಮಂಡಿಸಿದರು. ಸಂಘದ ಸಿಬ್ಬಂದಿಗಳು ವಿವಿಧ ಕಾರ್ಯಕಲಾಪಗಳನ್ನು ನಿರ್ವಹಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಾಮಾನ್ಯ ಸಭೆಯನ್ನು ಯಶಸ್ವಿಗೊಳಿಸಿದರು. ರಾಘವೇಂದ್ರ ಕೆ ವಂದಿಸಿದರು.