ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಪಿ ಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಅನನ್ಯ ಎಂದು ತಿಳಿಯಲಾಗಿದೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಅರುಣ್ ಎಂಬವರ ಮಗಳಾದ ಅನನ್ಯ 17 ವರ್ಷ ಇವಳು ಹೆಮ್ಮಾಡಿಯ ಜನತಾ ಹೈಸ್ಕೂಲ್‌ನಲ್ಲಿ ಪ್ರಥಮ PUC ವಿದ್ಯಾಬ್ಯಾಸ ಮಾಡುತ್ತಿದ್ದು, ಕಳೆದ 1 ತಿಂಗಳಿನಿಂದ ಕಾಲೇಜಿಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದು, ಹೋಗುವಂತೆ ತಿಳಿಸಿದ ಸಮಯ ಹೆದರಿಕೊಂಡು ಅಸ್ತಮಾ ಸಮಸ್ಯೆ ಇರುವಂತೆ ಮಾಡುತ್ತಿದ್ದು ಇದಕ್ಕೆ ಸ್ಥಳೀಯ ವೈದ್ಯರಲ್ಲಿ ಹಾಗೂ ಕುಂದಾಪುರದ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದ್ದಾಗಿದೆ. ದಿನಾಂಕ 13/08/2025 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಅನನ್ಯಾ ಮನೆಯ ರೂಮ್ ನ ಚಿಲಕ ಹಾಕಿಕೊಂಡಿದ್ದು, ಮನೆಯಲ್ಲಿದ್ದ ಪಿರ್ಯಾದಿದಾರರ ಹೆಂಡತಿ ಹಾಗೂ ಇತರರು ಬಾಗಿಲು ಚಿಲಕ ಒಡೆದು ಒಳಗೆ ಹೋಗಿ ನೋಡಲಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.