Home Karavali Karnataka ಅ.ಭಾ.ವಿ.ಪ ಮಂಗಳೂರು ವಿಭಾಗ ಅಭ್ಯಾಸ ವರ್ಗ ಪತ್ರಕ ಬಿಡುಗಡೆ…!!

ಅ.ಭಾ.ವಿ.ಪ ಮಂಗಳೂರು ವಿಭಾಗ ಅಭ್ಯಾಸ ವರ್ಗ ಪತ್ರಕ ಬಿಡುಗಡೆ…!!

ಉಡುಪಿ : ಇದೇ ಬರುವ ಸೆಪ್ಟೆಂಬರ್ 5, 6, 7 ರಂದು ಉಡುಪಿ ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು, “ವಿಭಾಗ ಅಭ್ಯಾಸ ವರ್ಗ”ದ ಪತ್ರಕವು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಚರಣಕಮಲದಿಂದ ಬಿಡುಗಡೆಗೊಂಡಿತು. ಮಂಗಳೂರು, ಪುತ್ತೂರು, ಕೊಡಗು, ಉಡುಪಿ ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದು, ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯವನ್ನು ಕಾಲೇಜು ವಿದ್ಯಾರ್ಥಿಗಳಲ್ಲಿ ಮೂಡಿಸುವ ಚಿಂತನೆಯೊಂದಿಗೆ ಈ ವರ್ಗವು ಸಂಪನ್ನಗೊಳ್ಳಲು ಪರ್ಯಾಯ ಶ್ರೀಗಳು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್, ನಗರ ಕಾರ್ಯದರ್ಶಿ ಮಾಣಿಕ್ಯ ಭಟ್, ನಗರ ಸಂಘಟನಾ ಕಾರ್ಯದರ್ಶಿ ರೋಹಿತ್ ಮತ್ತು ನಗರ ಸಂಪರ್ಕ ಪ್ರಮುಖರಾದ ಮನೀಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.