ಪುತ್ತೂರು: ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವತಿಯರನ್ನು ಪುತ್ತೂರಿನ ಇನಾಮೊಗ್ರುವಿನ ಮೋನಿಶಾ (23) ಮತ್ತು ಮಂಡ್ಯದ ಪಾಂಡವಪುರದ ದಿವ್ಯಾ (20) ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಮಂಡ್ಯದಲ್ಲಿ ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದರು. ವರದಿಯ ಪ್ರಕಾರ, ಇವರಿಬ್ಬರೂ ನಾಲ್ಕು ದಿನಗಳ ಹಿಂದೆ ಮೋನಿಶಾ ಅವರ ಮನೆಗೆ ಬಂದಿದ್ದು, ಅಂದಿನಿಂದ ನಾಪತ್ತೆಯಾಗಿದ್ದಾರೆ.
ಈ ಇಬ್ಬರೂ ಯುವತಿಯರು ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಾತನಾಡಲಾಗದ ಭಿನ್ನ ಸಾಮರ್ಥ್ಯದವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ 9480805363, 94808053008 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.