Home Crime ವಿವಾಹಿತ ಮಹಿಳೆಯೊಬ್ಬರು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ…!!

ವಿವಾಹಿತ ಮಹಿಳೆಯೊಬ್ಬರು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ…!!

ಧರ್ಮಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪ ವಿವಾಹಿತ ಮಹಿಳೆಯೊಬ್ಬರು ತನಗೆ ಮಕ್ಕಳಾಗದ ಕೊರಗಿನಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಾವನ್ನಪ್ಪಿದ ಮಹಿಳೆ ವಿನುತಾ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ಸಂದೇಶ್‌, ಪ್ರಾಯ: 35 ವಷ, ತಂದೆ: ವೆಂಕಪ್ಪ ಪೂಜಾರಿ, ವಾಸ: ಪಿಜತ್ತಡ್ಕ ಮನೆ, ಮುಳಿಕ್ಕಾರ್‌ ಧರ್ಮಸ್ಥಳ ಗ್ರಾಮ,  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು  ಸುಮಾರು 3 ವರ್ಷಗಳ ಹಿಂದೆ  ವಿನುತಾ(35) ಎಂಬವರನ್ನು ವಿವಾಹವಾಗಿದ್ದು, ಅವರಿಗೆ ಮಕ್ಕಳಾಗದೇ ಇದ್ದು, ಪಿರ್ಯಾದಿದಾರರ ಪತ್ನಿ ವಿನುತಾರವರು ಇದೇ ಕೊರಗಿನ ಲ್ಲಿದ್ದವರು ದಿನಾಂಕ: 06-08-2025 ರಂದು 22-30 ಗಂಟೆಯಿಂದ 23-30 ಗಂಟೆಯ ಮದ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮುಳಿಕ್ಕಾರ್‌ ಪಿಜತ್ತಡಿ ಎಂಬಲ್ಲಿ ಪಿರ್ಯಾದಿದಾರರ ಬಾಬ್ತು ಮನೆಯಲ್ಲಿ   ಬೆಡ್‌ ರೂಮಿನ ಕೋಣೆಯ ಬಾಗಿಲನ್ನು ಒಳಗಿನಿಂದ ಲಾಕ್‌ ಮಾಡಿ  ಬೆಡ್‌ ರೂಮಿನ ಪ್ಯಾನಿಗೆ ಬಟ್ಟೆಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯುಡಿಆರ್‌: 37/2025  ಕಲಂ: 194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ