ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ವೈಭವದ ಹೊರೆ ಕಾಣಿಕೆ ಮೆರವಣಿಗೆ ಬುಧವಾರ ನಡೆಯಿತು.
ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊಂಡ ಈ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಸಾಂಪ್ರಾದಾಯಿಕ ರೀತಿಯಲ್ಲಿ ಚಾಲನೆ ನೀಡಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್. ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ, ಶೆಟ್ಟಿ ಇಂದ್ರಾಳಿ, ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಮಾಧವ ಪೂಜಾರಿ, ಪ್ರಧಾನ ತಂತ್ರಿ ಪಿ.ಶಶಿಕಾಂತ ತಂತ್ರಿ. ಪ್ರಧಾನ ಅರ್ಚಕ ಪಿ.ವಾಸುದೇವ ಉಪಾಧ್ಯ, ಉದ್ಯಮಿ ಪುರುಷೋತ್ತಮ ಶೆಟ್ಟಿ ಭುವನೇಂದ್ರ ಕಿಡಿಯೂರು, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ಜಯ ಸಿ.ಕೋಟ್ಯಾನ್, ದಿನೇಶ್ ಪುತ್ರನ್, ಎಂ.ಪ್ರಭಾಕರ ಶೆಟ್ಟಿ ಶೇಖರ್ ಶೆಟ್ಟಿ ಯು. ಸುರೇಶ್ ಶೇಟ್, ರಾಜೇಶ್ ಬಿ., ವಿದ್ಯಾ ಲತಾ ಯು.ಶೆಟ್ಟಿ ಶಮಿತಾ ಎಸ್. ಭಂಡಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಕಿದಿಯೂರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಸುಮಾರು 250ಕ್ಕೂ ಅಧಿಕ ವಾಹನಗಳು ಪಾಲ್ಗೊಂಡವು. ಡೋಲು, ಕೊಂಬು, ಚೆಂಡೆ, ‘ಬಿರುದಾವಳಿ, ಹಸಿರು ಕೊಡೆ, ಕುಣಿತ ಭಜನಾ ತಂಡಗಳು, ಕೀಲು ಕುಮರೆ, ಸ್ತಬ್ಧಚಿತ್ರ, ನಾಸಿಕ್ ಬ್ಯಾಂಡ್, ಹನುಮಂತ, ರಂಗೋಲಿ ನೃತ್ಯ ತಂಡ ಹೀಗೆ ನಾನಾ ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಮೆರವಣಿಗೆಯ ಶೋಭೆ ಹೆಚ್ಚಿಸಿದವು. ದೇವಳದ ಬ್ರಹ್ಮಕಲಶೋತ್ಸವ ಏ. 20ರ ವರೆಗೆ ನಡೆಯಲಿದೆ.





