ಉಡುಪಿ : ವಾಟ್ಸಾಪ್ ಮೂಲಕ ಬಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ಪರಿಣಾಮ ಲಕ್ಷಾಂತರ ರೂಪಾಯಿ ಕಳೆದುಕೊಂಡ ಆನ್‌ಲೈನ್ ವಂಚನೆಗೊಳಗಾಗಿರುವ ಬಗ್ಗೆ ಉಡುಪಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪಡುಬಿದ್ರಿಯ ಹೆಜಮಾಡಿಯ ಅಬ್ದುಲ್ ಹಮೀದ್ ಅವರಿಗೆ ಏಪ್ರಿಲ್ 12 ರಂದು ಅವರ ಪರಿಚಯಸ್ಥ ಕುಮಾರಸ್ವಾಮಿ ಅವರ ಮೊಬೈಲ್ ಸಂಖ್ಯೆಯಿಂದ APK ಫೈಲ್ ಬಂದಿದ್ದು, ಫೈಲ್ ಡೌನ್‌ಲೋಡ್ ಮಾಡಿದ ನಂತರ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಏಪ್ರಿಲ್ 13 ರಂದು, ಹಂತ ಹಂತವಾಗಿ ಒಟ್ಟು 4.86 ಲಕ್ಷ ರೂ. ಹಣ ಕಡಿತವಾಗಿದೆ ಎಂದು ದೂರಲಾಗಿದೆ. ಉಡುಪಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





