Home Crime ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಾರೊಂದು ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾದ ಪ್ರಕರಣ :...

ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಾರೊಂದು ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾದ ಪ್ರಕರಣ : ಆರೋಪಿಯ ಬಂಧನ….!!

ಉಡುಪಿ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಾರೊಂದು ಪೊಲೀಸರು ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಇದರಲ್ಲಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನ ಸಂಭವಿಸಿದೆ.

ಬಂಧಿತ ಆರೋಪಿ ಸುರತ್ಕಲ್ ನ ಮೊಹಮ್ಮದ್ ಶಾರೋಜ್ ಎಂದು ಗುರುತಿಸಲಾಗಿದೆ. ಉಳಿದಂತೆ ಪರಾರಿಯಾವರನ್ನು ಅಜೀಮ್ ಕಾಪು, ಸಫ್ವಾನ್ ಕಾಪು, ರಾಜಿಕ್ ಬಜ್ಪೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ :

ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರು, ಬಸವರಾಜ್‌ ಕನಶೆಟ್ಟಿ ರವರು ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 81/2025 ಕಲಂ: 303(2),112 ಬಿ.ಎನ್‌.ಎಸ್‌. & 4, 5, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ & ಕಲಂ 11(1)(ಡಿ) ಪ್ರಿವೆನ್ಸನ್‌ ಆಪ್‌ ಕ್ರುವೆಲ್ಟಿ ಟು ಅನಿಮಲ್ಸ್‌ ಆಕ್ಟ್‌ & ಕಲಂ 66(1) ಜೊತೆಗೆ 192(ಎ) ಐ.ಎಂ.ವಿ. ಆಕ್ಟ್‌ ಪ್ರಕರಣದಲ್ಲಿ ಆರೋಪಿ ಹಾಗೂ ಸೊತ್ತು ಪತ್ತೆಯ ಬಗ್ಗೆ ದಿನಾಂಕ: 04.08.2025 ರಂದು ರಾತ್ರಿ ವೇಳೆ ಖಾಸಗಿ ವಾಹನದಲ್ಲಿ ಸಿಬ್ಬಂದಿಯವರನ್ನು ಕರೆದುಕೊಂಡು ಠಾಣಾ ಪಿ.ಎಸ್‌.ಐ ಪವನ್‌ ನಾಯಕ್‌ ಇವರು ಇನ್ನೊಂದು ಖಾಸಗಿ ವಾಹನದಲ್ಲಿ ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಸದ್ರಿ ಪ್ರಕರಣದಲ್ಲಿ ಸಂಶಯಿತ ಆರೋಪಿಗಳು ಉಡುಪಿ ಕಡೆಗೆ ದನ ಕಳವು ಮಾಡಲು ಕಾಫಿ ಬಣ್ಣದ ಪಾರ್ಚುನರ್‌ ಕಾರಿನಲ್ಲಿ ಬಂದಿರುತ್ತಾರೆ ಎಂಬುದಾಗಿ ಖಚಿತ ಮಾಹಿತಿಯಂತೆ ಕುಂದಾಪುರ, ಉಡುಪಿ, ಕಾಪು ಕಡೆಗಳಲ್ಲಿ ಸಂಚರಿಸಿ ನಂತರ ಹೆಜಮಾಡಿ ಕಡೆಯಲ್ಲಿ ಸಂಚರಿಸುತ್ತಿರುವಾಗ ಸದ್ರಿ ಸಂಶಯಿತ ಆರೋಪಿಗಳು ದನಗಳನ್ನು ಕಳವು ಮಾಡಿಕೊಂಡು ಸದ್ರಿ ಪಾರ್ಚುನರ್‌ ಕಾರಿನಲ್ಲಿ ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿರುವುದಾಗಿ ಖಚಿತ ಮಾಹಿತಿಯಂತೆ ಬಸವರಾಜ್‌ ಕನಶೆಟ್ಟಿ, ಪೊಲೀಸ್ ಉಪ-ನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ ಇವರು ಪೊಲೀಸ್‌ ಠಾಣಾ ವಾಹನವನ್ನು ಹೆಜಮಾಡಿ ಟೋಲ್‌ ಬಳಿ ರಸ್ತೆಯ ಬದಿಗೆ ನಿಲ್ಲಿಸಿ, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹಾದುಹೋಗುವ ಟೋಲ್‌ ಬಳಿ ನಿಂತು ಕಾಯುತ್ತಿರುವಾಗ ಲೇನ್‌ ನಂಬ್ರ 3 ರ ಬಳಿ ಕೆ.ಎಸ್‌.ಆರ್.ಟಿ.ಸಿ ಬಸ್ಸೊಂದು ನಿಂತಿದ್ದು, ಅದರ ಹಿಂದೆ ಒಂದು ಬೊಲೇನೋ ಕಾರು ನಿಂತಿದ್ದು, ಅದರ ಹಿಂದೆ ಸಂಶಯಿತ ಪಾರ್ಚುನರ್‌ ಕಾರು ಇದ್ದು, ಕಾರಿನ ಒಳಗೆ ಚಾಲಕ ಸೇರಿ 4 ಜನರು ಇದ್ದು, ಕಾರಿನ ಒಳಗೆ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಇರಿಸಿದ್ದು ಕಂಡು ಬಂತು. ಕಾರನ್ನು ಪರಿಶೀಲಿಸುವಷ್ಟರಲ್ಲಿ ಪಾರ್ಚುನರ್‌ ಕಾರಿನ ಒಳಗೆ ಹಿಂದೆ ಇದ್ದವರು ನಮ್ಮನ್ನು ಹುಡುಕಿಕೊಂಡು ಇಲ್ಲಿಗೂ ಬಂದಿದ್ದೀರಾ ಇವರನ್ನು ಬಿಡಬೇಡಾ ಅವರ ಮೇಲೆ ವಾಹನವನ್ನು ಹಾಯಿಸಿಕೊಂಡು ಹೋಗು ಎಂದು ಕಾರಿನ ಚಾಲಕನಲ್ಲಿ ಹೇಳಿದರು. ಅಷ್ಟರಲ್ಲಿ ಕಾರಿನ ಚಾಲಕನು ಅವರನ್ನು ಕೊಲ್ಲುವ ಉದ್ದೇಶದಿಂದ ಕಾರನ್ನು ಒಮ್ಮೆಲೆ ವೇಗವಾಗಿ ಅವರ ಮೇಲೆ ಚಲಾಯಿಸಿದ್ದು, ಆಗ ಅವರು ತಪ್ಪಿಸಿಕೊಂಡು ಕೆಳಗೆ ಬಿದ್ದಿದ್ದು, ಕಾರನ್ನು ಬಸವರಾಜ್‌ ಕನಶೆಟ್ಟಿ, ಪೊಲೀಸ್ ಉಪ-ನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆಯ ಇವರ ಕೈ ಮೇಲೆ ಹಾಯಿಸಿದ್ದು, ಮುಂಭಾಗದಲ್ಲಿ ಬೊಲೇನೋ ಹಾಗೂ ಕೆ.ಎಸ್‌.ಆರ್‌.ಟಿಸಿ ಬಸ್ಸು ಇದ್ದುದರಿಂದ ಆತನಿಗೆ ಮುಂದಕ್ಕೆ ಹೋಗಲಾಗದೆ ಪುನಃ ವಾಪಾಸು ಹಿಂದಕ್ಕೆ ಒಮ್ಮೆಲೆ ಚಲಾಯಿಸಿದ್ದು,ಆಗ ಹಿಂದುಗಡೆ ಇದ್ದ ಸಂದೀಪ್‌ ಪಿ.ಸಿ, ಇವರಿಗೆ ವಾಹನವನ್ನು ಗುದ್ದಿಸಿದ್ದು ಅವನು ಕೆಳಗೆ ಬಿದ್ದಿದ್ದು, ಅವರ ಬಲಭುಜ ಹಾಗೂ ಕಿರುಬೆರಳಿಗೆ ಗಾಯವಾಗಿರುತ್ತದೆ. ನಂತರ ಅದರ ಹಿಂದೆ ಬಂದು ನಿಂತಿದ್ದ ಟೋಲ್‌ ಪೆಟ್ರೋಲಿಂಗ್‌ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತದೆ. ಡಿಕ್ಕಿ ಹೊಡೆದ ರಭಸಕ್ಕೆ ಟೋಲ್‌ ವಾಹನ ಹಿಮ್ಮುಖ ಚಲಿಸಿ ಅದರ ಹಿಂದೆ ಇದ್ದ ಪಿ.ಎಸ್‌.ಐ (ಕಾ.ಸು) ಪವನ್‌ ನಾಯಕ್‌ ಇವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಅಷ್ಟರಲ್ಲಿ ಸಿಬ್ಬಂದಿಯವರು ಪಾರ್ಚುನರ್‌ ಕಾರ್‌ನ ಚಾಲಕರನ್ನು ಹಿಡಿದು ಕೆಳಗೆ ಇಳಿಸಿ ಹಿಡಿದುಕೊಂಡರು. ಅಷ್ಟರಲ್ಲಿ ಪಾರ್ಚುನರ್‌ ಕಾರ್‌ನ ಚಾಲಕರ ಎಡಬದಿಯಲ್ಲಿ ಕುಳಿತಿದ್ದವನು. ಕಾರ್‌ನ ಚಾಲಕ ಸೀಟ್‌ಗೆ ಬಂದು ಕುಳಿತು ಕಾರನ್ನು ಒಮ್ಮಲೆ ಮುಂದಕ್ಕೆ ಚಲಾಯಿಸಿ ಕಾರಿನ ಮುಂಭಾಗದಲ್ಲಿ ಟೋಲ್‌ನ ಸರದಿಯಲ್ಲಿ ಇದ್ದ ಬೊಲೇನೋ ಕಾರಿಗೆ ಗುದ್ದಿ ದೂಡಿಕೊಂಡು ಅಲ್ಲಿಂದ ಪರಾರಿಯಾಗಿರುತ್ತಾರೆ.

ಈ ಘಟನೆಯು ದಿನಾಂಕ: 05.08.2025 ರಂದು ಬೆಳಿಗ್ಗೆ 5:20 ಗಂಟೆಯಿಂದ 5:30 ಗಂಟೆಯ ಮಧ್ಯೆ ಆಗಿರುತ್ತದೆ. ಹಿಡಿಯಲಾದ ಕಾರಿನ ಚಾಲಕನ ಹೆಸರು ಕೇಳಲಾಗಿ ಮಹಮ್ಮದ್‌ ಶಾರೋಜ್‌ ಸುರತ್ಕಲ್‌ ಆಗಿರುತ್ತದೆ. ಕಾರಿನಲ್ಲಿ ಪರಾರಿಯಾದವರು ಸಫ್ವಾನ್‌ ಕಾಫು, ಅಜೀಮ್‌ ಕಾಪು ಹಾಗೂ ರಾಜಿಕ್‌ ಬಜ್ಪೆ ಆಗಿರುತ್ತಾರೆ. ಆರೋಪಿತರು ಅಕ್ರಮವಾಗಿ ಗೋವನ್ನು ವಧೆ ಮಾಡಿ, ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಯೋ ಕಳವು ಮಾಡಿ ಎಲ್ಲಿಗೋ ಐದಾರು ದನಗಳನ್ನು ಪಾರ್ಚುನರ್‌ ಕಾರ್‌ನಲ್ಲಿ ಸಾಗಿಸುತ್ತಿದ್ದು ಸದ್ರಿ ವಾಹನವನ್ನು ಹೆಜಮಾಡಿ ಟೋಲ್‌ ಬಳಿ ತಡೆದು ನಿಲ್ಲಿಸಿ ಪರಿಶೀಲಿಸುವ ಸಮಯ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪಾರ್ಚುನರ್‌ ಕಾರನ್ನು ಮೈಮೇಲೆ ಚಲಾಯಿಸಿ ಕೊಲೆ ಮಾಡಲು ಪ್ರಯತ್ನಿಸಿ ತೀವೃ ತರಹದ ಗಾಯವನ್ನುಂಟು ಮಾಡಿ, ಸಾರ್ವಜನಿಕ ಸೊತ್ತಾದ ಟೋಲ್‌ಗೆ ಸಂಬಂಧಪಟ್ಟ ವಾಹನ ಹಾಗೂ ಬೂಮ್‌ ಬಾರಿಯರ್‌ನ್ನು ಜಖಂಗೊಳಿಸಿ ನಷ್ಟವುಂಟು ಮಾಡಿರುತ್ತಾರೆ.

ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಅ.ಕ್ರ. 89/2025 ಕಲಂ:121(1),132,109,303(2),112 ಜೊತೆಗೆ 3(5) ಬಿ.ಎನ್‌.ಎಸ್‌. & 4,5,12 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ & ಕಲಂ 11(1)(ಡಿ) ಪ್ರಿವೆನ್ಸನ್‌ ಆಪ್‌ ಕ್ರುವೆಲ್ಟಿ ಟು ಅನಿಮಲ್ಸ್‌ ಆಕ್ಟ್‌ & ಕಲಂ:66 (1) ಜೊತೆಗೆ 192(ಎ) ಐ.ಎಂ.ವಿ ಆಕ್ಟ್‌ & ಕಲಂ 2 ಕೆ.ಪಿ.ಡಿ.ಎಲ್‌ ಆಕ್ಟ್‌ 1981 ರಂತೆ ಪ್ರಕರಣ ದಾಖಲಾಗಿರುತ್ತದೆ
ಕಾರಿನೊಂದಿಗೆ ಪರಾರಿಯಾಗಿರುವ ಆರೋಪಿಗಳು ಕಾರನ್ನು ಉಳ್ಳಾಲದಲ್ಲಿ ದನ ಸಹಿತ ಬಿಟ್ಟು ಹೋಗಿದ್ದನ್ನು ಸ್ವಾಧೀನಪಡಿಸಲಾಗಿದೆ. ಕಾರಿನಲ್ಲಿದ್ದ ದನಗಳನ್ನು ಸುರಕ್ಷಿತವಾಗಿ ಬಜಗೋಳಿಯ ಗೋಶಾಲೆಗೆ ಕಳುಹಿಸಿಕೊಡಲಾಗಿದೆ.