ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಕಾರ್ನಾಡು ಕೊಕ್ಕರಕಲ್ ಬಳಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಘಟಿಸಿದೆ.
ಮೃತ ಮಹಿಳೆ ಚಿತ್ರಾಪು ಮರ್ಕಂಜ నిವಾಸಿ ವನಜ ಪುರುಷೋತ್ತಮ ಪೂಜಾರಿ (59) ಎಂದು ತಿಳಿದು ಬಂದಿದೆ.
ಮೃತ ವನಜ ಪುರುಷೋತ್ತಮ ಪೂಜಾರಿಯವರು ಹೈನುಗಾರರಾಗಿದ್ದು ಕೊಕ್ಕರಕಲ್ ಬಳಿಯ ಹಾಲಿನ ಸೊಸೈಟಿಗೆ ಜೆಸಿಂತಾ ಮಚಾದೋ ಎಂಬವರ ಜೊತೆ ಹಾಲು ತೆಗೆದುಕೊಂಡು ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದು ಮಾರುದ್ಧ ಎಳೆದುಕೊಂಡು ಹೋಗಿ ಹೆದ್ದಾರಿ ಬದಿಯ ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದ ತೀವ್ರತೆಗೆ ವನಜಾರವರು ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಸಂದರ್ಭ ವನಜ ರವರ ಜೊತೆಗೆ ಇದ್ದ ಜೆಸಿಂತಾ ರವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಅಧಿಕಾರಿ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿ, ಕಾರು ಚಾಲಕನನ್ನು ವಶಕ್ಕೆ ಪಡೆದು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.



