Home Crime ಪಡುಬಿದ್ರಿ : ಮನೆ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನ,ಬೆಳ್ಳಿ ಕಳವು : ಆರು ಮಂದಿ...

ಪಡುಬಿದ್ರಿ : ಮನೆ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನ,ಬೆಳ್ಳಿ ಕಳವು : ಆರು ಮಂದಿ ವಿರುದ್ಧ ಪ್ರಕರಣ ದಾಖಲು…!!

ಪಡುಬಿದ್ರಿ: ಉದ್ಯೋಗದ ನಿಮಿತ್ತ ಮುಂಬೈನಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿದ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೂರುದಾರೆ ರಜನಿ (51), ಕೋಡಿ ಹೆಜಮಾಡಿ ಗ್ರಾಮ, ಕಾಪು ನಿವಾಸಿಯಾಗಿದ್ದು, ಜ. 21 ರಂದು ಸಂಜೆ ಸುಮಾರು 5 ಗಂಟೆಯ ವೇಳೆಗೆ ಅವರ ಸಂಬಂಧಿಕರಾದ ರೇಖಾ ಕಾಂಚನ್ (60), ಹೇಮಲತಾ ಕೋಟ್ಯಾನ್ (49), ದೇವದಾಸ್ ಕಾಂಚನ್, ರೋಹಿತ್ ಕೋಟ್ಯಾನ್, ಧನರಾಜ್ ಕಾಂಚನ್ ಹಾಗೂ ಶ್ರೀಶಾ ಕೋಟ್ಯಾನ್ ಎಂಬವರು KA-20-ES-3529 ನಂಬರಿನ ಕೀ ಮೇಕರ್ ಅನ್ನು ಕರೆದುಕೊಂಡು ಬಂದು ಮನೆಯ ಪ್ರಧಾನ ಬಾಗಿಲನ್ನು ಒಡೆದು ಒಳ ಪ್ರವೇಶಿಸಿರುವುದನ್ನು ದೂರುದಾರೆ ರಜನಿ ಅವರು ಸಿಸಿ ಕ್ಯಾಮರಾ ಮೂಲಕ ಗಮನಿಸಿದ್ದಾರೆ.

ಮನೆಗೆ ಬೀಗ ಹಾಕಿ ಹೋಗುವ ಸಂದರ್ಭ ಒಳಗಡೆ ಇಟ್ಟಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಂಗಳಸೂತ್ರ, ಒಂದು ಡೈಮಂಡ್ ಒಡ್ಡು ಉಂಗುರ, ಸುಮಾರು 11 ಗ್ರಾಂ ತೂಕದ ಚಿನ್ನದ ಚೈನ್ ಸೇರಿ ಒಟ್ಟು ಚಿನ್ನಾಭರಣಗಳ ಅಂದಾಜು ಮೌಲ್ಯ ರೂ. 6,65,000/- ಆಗಿದ್ದು, ಜೊತೆಗೆ ಎರಡು ಬೆಳ್ಳಿ ಚೆಂಬುಗಳು, ಎರಡು ಬೆಳ್ಳಿ ತಟ್ಟೆಗಳು, ಬೆಳ್ಳಿ ದೇವರ ಸಾಮಾಗ್ರಿಗಳು ಹಾಗೂ ಆರು ಬೆಳ್ಳಿ ದೀಪಗಳು ಸೇರಿ ಒಟ್ಟು ರೂ. 1,27,000/- ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ರೂ. 12,000/- ನಗದು ಹಣ ಕಳವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 329(4), 305(a) ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.