Home Crime ವಿಟ್ಲ : ಕಾಣಿಕೆ ಹುಂಡಿ ಒಡೆದು ಹಣ ದೋಚಿದ ಮೂವರು ಕಳ್ಳರ ಸೆರೆ…!!

ವಿಟ್ಲ : ಕಾಣಿಕೆ ಹುಂಡಿ ಒಡೆದು ಹಣ ದೋಚಿದ ಮೂವರು ಕಳ್ಳರ ಸೆರೆ…!!

ವಿಟ್ಲ : ಧಾರ್ಮಿಕ ಶೃದ್ದಾ ಕೇಂದ್ರಕ್ಕೆ ಸಂಬಂಧಿಸಿದಂತೆ ರಸ್ತೆ ಬದಿಯಲ್ಲಿ ಇಟ್ಟ ಕಾಣಿಕೆ ಡಬ್ಬದಲ್ಲಿದ್ದ ಹಣವನ್ನು ಕದ್ದ ಕಳ್ಳರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ವಿಟ್ಲ ಕಸಬಾ ಗ್ರಾಮದ ನಿವಾಸಿಗಳಾದ ತ್ವಾಹಿದ್‌ (19), ಉಮ್ಮರ್‌ ಫಾರೂಕ್‌ (18 , ಮೊಹಮ್ಮದ್‌ ನಬೀಲ್‌(18) ಎಂದು ಗುರುತಿಸಲಾಗಿದೆ.

ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ ಡಿ.ನಾರಾಯಣ ರಾವ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾರಾಯಣ ಅವರು ಅಧ್ಯಕ್ಷರಾಗಿದ್ದ ಧಾರ್ಮಿಕ ಶ್ರಧ್ದಾ ಕೇಂದ್ರಕ್ಕೆ ಸಂಬಂಧಿಸಿದ ಕಾಣಿಕೆ ಕಟ್ಟೆಯನ್ನು ಕನ್ಯಾನ ಗ್ರಾಮದ ದೇಲಂತ ಬೆಟ್ಟು ಶಾಲಾ ಪಕ್ಕದ ರಸ್ತೆಯ ಬದಿಯಲ್ಲಿ ಹಾಗೂ ದೇಲಂತಬೆಟ್ಟು ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಅಳವಡಿಸಿದ್ದರು. ಕಾಣಿಕೆ ಕಟ್ಟೆಗಳಲ್ಲಿ ಸಂಗ್ರಹವಾಗುವ ಹಣವನ್ನು ತೆಗೆಯಲು ಜುಲೈ 26 ರಂದು ಸ್ಥಳಗಳಿಗೆ ತೆರಳಿದಾಗ, ಎರಡೂ ಕಾಣಿಕೆ ಕಟ್ಟೆಗಳ ಬೀಗವನ್ನು ಒಡೆದು ಸುಮಾರು 12,000/- ರೂ ನಿಂದ 15,000/-ರೂ ಹಣವನ್ನು ಕಳವು ಮಾಡಿರುವುದು ಕಂಡುಬಂದಿರುತ್ತದೆ ಎಂದು ದೂರು ನೀಡಿದ್ದರು.