Home Latest ಸಿಡಿಲು ಬಡಿದು ಕಾರ್ಮಿಕ ದಾರುಣ ಸಾವು

ಸಿಡಿಲು ಬಡಿದು ಕಾರ್ಮಿಕ ದಾರುಣ ಸಾವು

ಉಡುಪಿ : ಜಿಲ್ಲೆಯಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಗಿದ್ದು, ಕುಂದಾಪುರ ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಬಳಿ ಸಿಡಿಲು ಬಡಿದು ಕಾರ್ಮಿಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

 

ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತಪಟ್ಟಿದ್ದು, ಲವಜೋತ್ ಸಿಂಗ್ ಸಿಂಗ್ (28) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ಕೆಲ ದಿನಗಳಿಂದ ಅರಾಟೆ ಹಳೆ ಸೇತುವೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಗುರುವಾರ ಸಂಜೆ ಪಂಜಾಬ್ ಮೂಲದ ಕಾರ್ಮಿಕರು ಸೇತುವೆ ಕಾಮಗಾರಿಯಲ್ಲಿ ನಿರತರಾಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

 

ಕುಂದಾಪುರ ತಾಲೂಕಿನಲ್ಲಿ ಸಂಜೆ ವೇಳೆ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ, ಮಾರ್ಗ ಮಧ್ಯೆ ಅಶುತೋಷ್ ಮೃತಪಟ್ಟಿದ್ದಾರೆ.

 

ಇನ್ನೋರ್ವ ಗಾಯಾಳು ಲವಜೋತ್ ಸಿಂಗ್ ಸಿಂಗ್ ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.