ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದ ತಲ್ಲೂರು ನಿಂದ ಹೆಮ್ಮಾಡಿ ಮುಳ್ಳಿಕಟ್ಟೆ ತ್ರಾಸಿ ನಾಗೂರು ಕಂಬದ ಕೋಣೆ ವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಹಾಗೂ ಹಲವು ಭಾಗಗಳಲ್ಲಿ ಕೆಂಪು ಮಣ್ಣು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ,
ಬೈಂದೂರು ಗಂಗೊಳ್ಳಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಪೋಲಿಸ್ ಇಲಾಖೆ ಅಕ್ರಮ ಗಣಿಗಾರಿಕೆ ದಂದೆ ನಡೆಸುವ ಜಾಗಕ್ಕೆ ದಾಳಿ ಮಾಡಿ ದಂಧೆಗೆ ಬಳಸಿದ ಲಾರಿ ಜೆಸಿಬಿ ಕೆಂಪು ಕಲ್ಲು ತೆಗೆಯುವ ಯಂತ್ರ ಇತ್ಯಾದಿ ಎಲ್ಲಾ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದೆ ಆದರೆ ಗಣಿ ಇಲಾಖೆ ಮಾತ್ರ ಅಕ್ರಮ ಗಣಿಗಾರಿಕೆ ನಡೆಸುವವರ ಪಾಲಿಗೆ ಗಣಿ ಅಧಿಕಾರಿಗಳು ವರದಾನವಾಗಿ ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಗಣಿ ಅಧಿಕಾರಿಗಳ ವಿರೋಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕಳೆದ ಹಲವು ದಿನಗಳಿಂದ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಪೋಲಿಸ್ ಇಲಾಖೆ ಮಾತ್ರ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ ಆದರೆ ಈತನಕ ಈ ಭಾಗದಲ್ಲಿ ಒಂದೇ ಒಂದು ಪ್ರಕರಣ ಗಣಿ ಇಲಾಖೆ ಅಧಿಕಾರಿಗಳು ದಾಖಲಿಸಿಕೊಂಡಿರುವುದಿಲ್ಲ , ಇದರಿಂದ ಸಾರ್ವಜನಿಕ ವಲಯದಲ್ಲಿ ಗಣಿ ಅಧಿಕಾರಿಗಳ ವಿರುದ್ಧ ಅನುಮಾನಕ್ಕೆ ಕಾರಣವಾಗಿದೆ
ಮಾನ್ಯ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಅಕ್ರಮ ಗಣಿಗಾರಿಕೆ ನಡೆಸುವವರ ಪಾಲಿಗೆ ವರದಾನವಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಅಭಿಪ್ರಾಯವಾಗಿದೆ.