ಉಡುಪಿ: ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಮುಂಬಯಿ ಸೈಬರ್ ಪೊಲೀಸ್ ಹೆಸರಿನಲ್ಲಿ ಕರೆ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಗೊಳಾಗದವರು ಲಿಯೋಲ್ಲಾ ಎಂದು ತಿಳಿದು ಬಂದಿದೆ.
ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಲಿಯೋಲ್ಲಾ ಇವರಿಗೆ ದಿನಾಂಕ 22/07/2025 ರಂದು ಬೆಳಗ್ಗೆ 11:30 ಗಂಟೆಗೆ ಕರೆ ಬಂದಿದ್ದು ಟೆಲಿಕಾಮ್ ರೆಗ್ಯುಲೇಟರಿ ಆಫ್ ಇಂಡಿಯಾ ಎಂದು ಹೇಳಿ ನಿಮ್ಮ ಸಿಮ್ ಕಾರ್ಡ್ ನಲ್ಲಿ ಕಿರುಕುಳ ಮತ್ತು ಸುಳ್ಳು ಜಾಹಿರಾತು ಹಲವಾರು ದೂರುಗಳು ದಾಖಲಾಗಿದ್ದು ಎಂದು ಹೇಳಿ ನಾವು ಮುಂಬೈ ಸೈಬರ್ ಪೊಲೀಸ್ ನವರಿಗೆ ಕರೆಯನ್ನು ವರ್ಗಾವಣೆ ಮಾಡುವುದಾಗಿ ಹೇಳಿ ನಂತರ ಮದ್ಯಾಹ್ನ 12:19 ಗಂಟೆಗೆ ಪಿರ್ಯಾದಿದಾರರಿಗೆ ವಾಟ್ಸಪ್ ಫೋನ್ ಕರೆ ಬಂದಿದ್ದು, ಅದರಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದವರು ನಿಮ್ಮ ಆಧಾರ್ ಕಾರ್ಡ್ ನರೇಶ್ ಗೊಯೆಲ್ ಮನಿ ಲಾಂಡ್ರಿಂಗ್ ಕೇಸ್ ನಲ್ಲಿದ್ದು ಎಂದು ಹಲವಾರು ಪ್ರಶ್ನೆಗಳು ಮಾಡಿ ನಿಮ್ಮ ಮೇಲೆ ವಾರೆಂಟ್ ಹೊರಡಿಸಿ ನಿಮಗೆ ದಸ್ತಗಿರಿ ಮಾಡುವುದಾಗಿ ಹೆದರಿಸಿ 24 ಗಂಟೆಯವರೆಗೆ ವಾಟ್ಸಪ್ ವಿಡಿಯೋಕಾಲ್ ನಲ್ಲಿರುವಂತೆ ತಿಳಿಸಿ ಮರುದಿನ ಮದ್ಯಾಹ್ನ 12:26 ಗಂಟೆಗೆ ಕರೆ ಬಂದಿದ್ದು ಇದರಲ್ಲಿ ನೀವು ಯಾವ ಕಡೆಯೂ ಹೋಗದೇ ನಿಮ್ಮ ಮೊಬೈಲ್ ಫೋನ್ ನ ಡಾಟಾ ಆಫ್ ಮಾಡದೇ ಇದ್ದು ನಾವು ನಿಮ್ಮನ್ನು ವಿಕ್ಷಣೆ ಮಾಡುತ್ತಿದ್ದು ಉಲ್ಲಂಘನೆ ಮಾಡಿದ್ದಲ್ಲಿ ದಸ್ತಗಿರಿ ಮಾಡುವುದಾಗಿ ಹೆದರಿಸಿ ದಿನಾಂಕ 25/07/2025 ರಂದು ಅವರು ಹೇಳಿದ ಹಾಗೆ ಅವರು ನೀಡಿದ ಬ್ಯಾಂಕ್ ಖಾತೆಗೆ 2 ಲಕ್ಷ ಮತ್ತು 4 ಲಕ್ಷ ವರ್ಗಾವಣೆ ಮಾಡಿರುತ್ತಾರೆ.
ಯಾರೋ ಅಪರಿಚಿತರು ಪಿರ್ಯಾದಿದಾರರನ್ನು ಹೆದರಿಸಿ ಅವರಿಂದ ಒಟ್ಟು 6 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2025 ಕಲಂ: 66(ಸಿ), 66(ಡಿ) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.