ಉಡುಪಿ : ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಲಡ್ ಬ್ಯಾಂಕ್ ನಲ್ಲಿ ರಾತ್ರಿ ವೇಳೆ ರಕ್ತ ಮಾರಾಟ ದಂಧೆ ನಡೆಯುತ್ತಿರುವ ಫೋಟೋ ಒಂದು ವೈರಲ್ ಆಗಿದೆ.
ಹೌದು ವೀಕ್ಷಕರೇ, ಉಡುಪಿಯ ಅಜ್ಜರಕಾಡು ಬ್ಲಡ್ ಬ್ಯಾಂಕ್ ನಿಂದ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ರಾತ್ರಿ ವೇಳೆ ರಕ್ತ ಮಾರಾಟವಾಗುತ್ತಿದೆ. ಈ ಬಗ್ಗೆ ಸತ್ಯಾಸತ್ಯತೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಸಮಾಜದ ಮುಂದೆ ಇಡಬೇಕು. ಜಿಲ್ಲೆಯ ಎಷ್ಟೋ ಸಂಘ ಸಂಸ್ಥೆಗಳು ಬಡವರಿಗೋಸ್ಕರ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಬ್ಲಡ್ ಕ್ಯಾಂಪ್ ಗಳನ್ನು ಉಡುಪಿ ಜಿಲ್ಲಾಧ್ಯoತ ನಡೆಸುತ್ತಿದೆ. ಜಿಲ್ಲಾಸ್ಪತ್ರೆಯ ಈ ಅವ್ಯವಹಾರದ ಫೋಟೋ ಮಾತ್ರ ಸದ್ಯ ಸಾರ್ವಜನಿಕರ ನಿದ್ದೆಗೆಡಿಸಿದೆ. ಇದರಿಂದ ಜನರ ನಂಬಿಕೆಗೆ ಪೆಟ್ಟು ಬಿದ್ದoತಾಗಿದೆ. ಇದರಲ್ಲಿ ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಲೇ ಬೇಕು
ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ಯ ಕತ್ತಲಲ್ಲಿ ರಕ್ತ ವ್ಯಾಪಾರ?
ಹೌದು. ಸಾರ್ವಜನಿಕರ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ರಕ್ತ ವ್ಯಾಪಾರಿಗಳು… ?
ಹೌದು ವೀಕ್ಷಕರೇ, ಇದು ಉಡುಪಿ ಜಿಲ್ಲಾ ಆಸ್ಪತ್ರೆಯ ಕೆಲವು ಭ್ರಷ್ಟ ಅಧಿಕಾರಿಗಳು ನಡೆಸುತ್ತಿರುವ ರಕ್ತದ ವ್ಯಾಪಾರ. ಉಡುಪಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಬೇಕಾದಷ್ಟು ರಕ್ತ ಇಲ್ಲಿ ರಾತ್ರಿಯ ಕತ್ತಲಲ್ಲಿ ಮಾರಾಟ ವಾಗುತ್ತದೆ . ಈ ರಕ್ತಗಳನ್ನು ನೀಡಿರುವ ಬಗ್ಗೆ ಯಾವುದೇ ಅಧಿಕೃತ ದಾಖಲೆ ಮಾತ್ರ ಇಲ್ಲಿಲ್ಲ. ಯಾವುದೇ ರಶೀದಿ ಇಲ್ಲಿ ದಾಖಲಾಗುವುದಿಲ್ಲ. ಇದೇ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಇಲ್ಲಿ ರಕ್ತ ಕೇಳಿದರೆ ಇಲ್ಲಿ ರಕ್ತ ಇಲ್ಲ, ದಾನಿಗಳನ್ನು ಕರೆ ತನ್ನಿ ಎನ್ನುತ್ತಾರೆ. ಆದರೆ ಖಾಸಗಿ ಆಸ್ಪತ್ರೆಯೊಂದಕ್ಕೆ ಒಂದೇ ಸಮಯಕ್ಕೆ 15 ಬಾಟಲ್ ರಕ್ತವನ್ನು ನೀಡಲಾಗಿದೆ. ಯಾವುದೇ ಬದಲಿ ರಕ್ತ ದಾನಿಗಳಿಲ್ಲದೆ…!
ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಮಂತ್ರಿ ಗಳು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಪಣ ತೊಟ್ಟಿದ್ದಾರೆ. ಆದರೆ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರಕ್ತ ಮಾರಾಟ ವಾಗುತ್ತದೆ. ಜಿಲ್ಲಾ ಸರ್ಜನ್ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆಯೇ? ಅಥವಾ ಬ್ಲಡ್ ಬ್ಯಾಂಕ್ ನ ಸಿಬ್ಬಂದಿಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಡೀಲ್ ಮಾಡಿಕೊಂಡಿದ್ದಾರೋ? ಈ ಬಗ್ಗೆ ಲೋಕಾಯುಕ್ತ ಪೊಲೀಸರು ಸುಮಟೋ ದೂರು ದಾಖಲಿಸಿ ಕೊಂಡು ತನಿಖೆ ನಡೆಸ ಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಆರೋಗ್ಯ ಸಚಿವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




