ಕುಂದಾಪುರ : ಬೈಂದೂರು ತಾಲೂಕಿನ ಗಂಗನಾಡು ನಿವಾಸಿ ಕೃಷ್ಣ ಮರಾಟೆ (75) ಕ್ಯಾರತೋಡ ಹೊಳೆ ದಾಟುವಾಗ ಕಾಲು ಜಾರಿ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ.
ಅವರು ಜು.25ರಂದು ಪುತ್ರಿ ಜಯಂತಿ ಮನೆಗೆ ಹೋಗಿದ್ದು, ಸಂಜೆ ವಾಪಾಸು ಬರುವುದಾಗಿ ಹೇಳಿದವರು ನಾಪತ್ತೆಯಾಗಿದ್ದರು. ಜು.28 ರಂದು ಮೃತಪಟ್ಟ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ.
ಹೊಳೆ ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪುತ್ರ ಭಾಸ್ಕರ ಮರಾಟೆ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.