ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಯುವಕನೋರ್ವ ಇಲಿಪಾಷಾಣ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತಪಟ್ಟ ಯುವಕ ವಡೇರ ಹೋಬಳಿ ನಿವಾಸಿ ಸತೀಶ ಎಂದು ತಿಳಿಯಲಾಗಿದೆ.
ಪ್ರಕರಣದ ಸಾರಾಂಶ ಪಿರ್ಯಾದಿ ಬಸವ ಮೊಗವೀರ ಪ್ರಾಯ:75 ವರ್ಷ ವಡೇರ ಹೋಬಳಿ ಗ್ರಾಮ ಕುಂದಾಪುರ ತಾಲೂಕು ಇವರ ಮಗ ಸತೀಶ 36ವರ್ಷ ರವರು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರು ದಿನಾಂಕ 28/07/2025 ರಂದು ಮಧ್ಯಾಹ್ನ 12:00 ಗಂಟೆಯ ಸಮಯಕ್ಕೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ವಾಪಾಸ್ಸು ಮಧ್ಯಾಹ್ನ ಸುಮಾರು 03:00 ಗಂಟೆಯ ಸಮಯಕ್ಕೆ ಮನೆಗೆ ಬಂದಾಗ ಸತೀಶನು ಕೆಳಗೆ ಬಿದ್ದುಕೊಂಡಿದ್ದು ಪಿರ್ಯಾದಿದಾರರ ಹೆಂಡತಿಯಲ್ಲಿ ವಿಚಾರಿಸಿದಾಗ ಸತೀಶನು ಇಲಿಪಾಷಾಣ ತೆಗೆದುಕೊಂಡಿರುತ್ತಾನೆ ಎಂಬುದಾಗಿ ತಿಳಿಸಿದ್ದು ಕೂಡಲೇ ಒಂದು ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿದ್ದು ದಿನಾಂಕ 02-08-2025 ರಂದು ಮಧ್ಯಾಹ್ನ 04:26 ಗಂಟೆಯ ಸಮಯಕ್ಕೆ ಚಿಕಿತ್ಸೆಯಲ್ಲಿದ್ದ ಸತೀಶನು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.