Home Crime ಬಂಟ್ವಾಳ : ಯುವಕ ಕಾಣೆಯಾದ ಬೆನ್ನಲ್ಲೇ ಸ್ಕೂಟರ್ ಪತ್ತೆ…!!

ಬಂಟ್ವಾಳ : ಯುವಕ ಕಾಣೆಯಾದ ಬೆನ್ನಲ್ಲೇ ಸ್ಕೂಟರ್ ಪತ್ತೆ…!!

ವಿಟ್ಲ : ಕೆಲಸಕ್ಕೆಂದು ತೆರಳಿ ಬಳಿಕ ನಾಪತ್ತೆಯಾಗಿದ್ದ ಯುವಕನೋರ್ವನ ದ್ವಿಚಕ್ರ ವಾಹನ ಹಾಗೂ ಆತನ ಮೊಬೈಲ್ ಫೋನ್ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಸಮೀಪದ ಜಕ್ರಿಬೆಟ್ಟು ಡ್ಯಾಂ ಬಳಿ ಪತ್ತೆಯಾಗಿದೆ.

ಸ್ಕೂಟರ್ ಕುರಿತು ಮಾಹಿತಿ ಸಂಗ್ರಹದ ವೇಳೆ ಕಡೇಶಿವಾಲಯ ನಿವಾಸಿ ಹೇಮಂತ್ ಎಂಬವರಿಗೆ ಸೇರಿದ ವಾಹನ ಎಂದು ಗೊತ್ತಾಗಿದೆ.

ಹೇಮಂತ್ ಅವಿವಾಹಿತ ಯುವಕನಾಗಿದ್ದು, ಜುಲೈ 28 ರಂದು ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸ್ಕೂಟರ್‌ನಿಲ್ಲಿಸಿ ನಾಪತ್ತೆಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಪೊಲೀಸರ ತಂಡ ಹೇಮಂತ್ ಗಾಗಿ ಹುಡುಕಾಟ ಆರಂಭಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ನೇತ್ರಾವತಿ ನದಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.