Home Karkala News ಮಾಹಿತಿ ನೀಡದ ಕಾರ್ಕಳ ಪುರಸಭೆ ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಮಾಜಿ ಸದಸ್ಯನ ಪ್ರತಿಭಟನೆ…!!

ಮಾಹಿತಿ ನೀಡದ ಕಾರ್ಕಳ ಪುರಸಭೆ ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಮಾಜಿ ಸದಸ್ಯನ ಪ್ರತಿಭಟನೆ…!!

ಕಾರ್ಕಳ : ಮಾಹಿತಿ ಹಕ್ಕು ಕಾಯಿದೆ ಅಡಿ ಕೇಳಿದ ಪ್ರಶ್ನೆಗೆ ದಾಖಲೆ ನೀಡದ ಕಾರ್ಕಳ ಪುರಸಭೆ ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಪುರಸಭೆ ಮಾಜಿ ಸದಸ್ಯರೊಬ್ಬರು ಕಚೇರಿಯಲ್ಲಿ ಧರಣಿ ಕುಳಿತ ಪ್ರಸಂಗ ನಡೆಯಿತು.

ಮಾಜಿ ಸದಸ್ಯ ಸುನಿಲ್ ಕೋಟ್ಯಾನ್ ಅವರು ಕೇಳಿದ ದಾಖಲೆಗಳನ್ನು ನೀಡದೇ ಸತಾಯಿಸುತ್ತಿದ್ದಾರೆ ಮಾಹಿತಿ ಕೇಳಿದರೆ ಪೂರ್ಣ ಮಾಹಿತಿ ನೀಡದೆ ತಾವೇ ಮೇಲ್ಮಮನವಿ ಸಲ್ಲಿಸಿ ಎಂದು ಉಡಾಪೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ಧರಣಿ ನಡೆಸಿದ್ದಾರೆ.

ಕಾರ್ಕಳ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಅಂಬಾಭವಾನಿ ದೇವಸ್ಥಾನ ರಸ್ತೆಗೆ ಪುರಸಭಾ ವತಿಯಿಂದ 2011 – 2012 ಸಾಲಿನಲ್ಲಿ ಡಾಮಾರೀಕಣ ನಡೆಸಲಾಗಿತ್ತು ತದನಂತರ ಪುನಃ ಅದೇ ರಸ್ತೆಗೆ ಮರು ಡಾಮಾರಿಕರಣ ನಡೆಸಲಾಗಿದೆ. ಆದರೆ ಈ ರಸ್ತೆಯನ್ನು ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಉದ್ಯಮಿಯೊಬ್ಬರು ಲೇಔಟ್ ಮಾಡಿ ಮುಚ್ಚಿ ಹಾಕಿದ್ದಾರೆ ಅಧಿಕಾರಿಗಳು ಉದ್ಯಮಿಗಳಿಗೆ ಸಹಕಾರ ನೀಡುತ್ತಿದ್ದು ಪುರಸಭೆ ಅಧಿಕಾರಿಗಳು ರಸ್ತೆ ಕೆಲಸವೇ ಮಾಡಿಸಿಲ್ಲ ಎಂದು ಹೇಳುತ್ತಿದ್ದು ಮಾಹಿತಿ ನೀಡುತ್ತಿಲ್ಲ. ಕೇಳಿದರೆ ಮೆಲ್ಮನವಿ ಸಲ್ಲಿಸಿ ಎಂದು ಮಾಹಿತಿ ಹಕ್ಕು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಸುನಿಲ್ ಕೋಟ್ಯಾನ್ ಆರೋಪಿಸಿ ನನಗೆ ನ್ಯಾಯ ಸಿಗುವರೆಗೆ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.