Home Crime ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ಕೇಸ್: ಇಬ್ಬರು ಅರೆಸ್ಟ್

ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ಕೇಸ್: ಇಬ್ಬರು ಅರೆಸ್ಟ್

 

ಬೆಂಗಳೂರು: ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

ಮಂಜುಳಾ, ವಿಜಯಲಕ್ಷ್ಮೀ ಆರೋಪಿಗಳನ್ನು ಹೆಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಾದ ಭವಾನಿ, ಸಿಂಧು, ಬಿಂದು ಎಂಬವರ ಪಾತ್ರ ಮೇಲ್ನೋಟಕ್ಕೆ ಇಲ್ಲ ಅನ್ನೋದು ಖಾತರಿಯಾಗಿದೆ. ಹಾಗಾಗಿ, ಇಂದು ಮತ್ತೆ ವಿಚಾರಣೆಗೆ ಬರಲು ಮೂವರು ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.

 

ಇಬ್ಬರನ್ನು ಬಂಧಿಸಿ ಬೆಳಗ್ಗೆ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜಡ್ಜ್ ಆದೇಶಿಸಿದ್ದಾರೆ.