ಮಂಗಳೂರು: ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾದ ಘಟನೆ ಎ. 10 ರಂದು ವರದಿಯಾಗಿದೆ.
ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ UDR no 9/2026 194 Bnss ಪ್ರಕರಣ ದಾಖಲಾಗಿರುತ್ತದೆ.
ಮೃತನ ಚಹರೆ ವಿವರ :
ಮೃತ ಅಪರಿಚಿತ ಗಂಡಸು ವಯಸ್ಸು ಸುಮಾರು 40 ರಿಂದ 45 ವರ್ಷ ಗುಂಡು ಮುಖ ಸಾಧಾರಣ ಮೈಕಟ್ಟು, ಎತ್ತರ ಸುಮಾರು 5.7 ಅಡಿ, ಗೋಧಿ ಮೈಬಣ್ಣ, ಜನಿವಾರ ಧರಿಸಿರುತ್ತಾರೆ,ತಲೆಯಲ್ಲಿ ಕಪ್ಪು ಬಿಳಿ ಕೂದಲು ಇರುತ್ತದೆ. ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ.
ವಾರಸುದಾರರು ಯಾರಾದರೂ ಇದ್ದಲ್ಲಿ ಮಂಗಳೂರು ರೈಲ್ವೆ ನಿಲ್ದಾಣದ ದೂರವಾಣಿ ಸಂಖ್ಯೆ : 9480800470 ನ್ನು ಸಂಪರ್ಕಿಸಬಹುದು.





