Home Crime ಹುಬ್ಬಳ್ಳಿ ಲವ್‌ ಜಿಹಾದ್ ಪ್ರಕರಣ : ಸಮೀರ್‌ ಮೊಬೈಲ್ ನಲ್ಲಿ ಹಲವು ವಿಡಿಯೋಗಳು ಪತ್ತೆ…!

ಹುಬ್ಬಳ್ಳಿ ಲವ್‌ ಜಿಹಾದ್ ಪ್ರಕರಣ : ಸಮೀರ್‌ ಮೊಬೈಲ್ ನಲ್ಲಿ ಹಲವು ವಿಡಿಯೋಗಳು ಪತ್ತೆ…!

ಹುಬ್ಬಳ್ಳಿಯ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾ ವಿರುದ್ಧ ಲವ್‌ ಜಿಹಾದ್‌ ಆರೋಪ ಕೇಳಿಬಂದಿದ್ದು, ಆತ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಖುಷಿ ಎಂಬ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ, ಹಲವು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಆತನ ಮೊಬೈಲ್‌ನಲ್ಲಿದ್ದ ವಿಡಿಯೋಗಳು ಸಾಕ್ಷಿಯಾಗಿವೆ.

ಹುಬ್ಬಳ್ಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಆರೋಪ ಸದ್ದು ಮಾಡಿದ್ದು, ವಿಜಯನಗರದ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾನ ಜಾತಕ ಒಂದೊಂದಾಗಿ ಹೊರಬರುತ್ತಿದೆ. ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್‌ ಜಿಹಾದ್‌ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್‌ನಲ್ಲಿ ಲಭ್ಯವಾಗಿದೆ. ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ, ದೌರ್ಜನ್ಯ ಮತ್ತು ಬಲವಂತದ ಗರ್ಭಪಾತಗಳ ಆರೋಪಗಳು ಆತನ ಮೇಲೆ ಕೇಳಿಬಂದಿದೆ.

ವಿಜಯನಗರದ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾ ತನ್ನ ಸಂಪರ್ಕ ವಲಯದ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್‌ ಜಿಹಾದ್ ನಡೆಸಿದ್ದು. ಅವನ ಮೊಬೈಲ್ ಫೋನ್‌ನಲ್ಲಿ ಹಲವು ಯುವತಿಯರೊಂದಿಗೆ ನಡೆದ ವಾಟ್ಸಪ್ ಚಾಟ್‌ಗಳು, ಫೋಟೋಗಳು ಮತ್ತು ಕೆಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಖುಷಿ ಕಲಬುರಗಿ ಎಂಬ ಯುವತಿಯೊಂದಿಗೆ ಸಮೀರ್ ಮುಲ್ಲಾ ಹೊಂದಿದ್ದ ಸಂಬಂಧವು ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಖುಷಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಇದೆ. ಇದಲ್ಲದೆ, ಪ್ರತೀ ಬಾರಿ ದೌರ್ಜನ್ಯ ನಂತರ ಗರ್ಭಪಾತ ಮಾಡಲು ಬಲವಂತ ಮಾಡುತ್ತಿದ್ದನೆಂದು ಹೇಳಲಾಗಿದೆ. ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.