Home Crime ವ್ಯಕ್ತಿಯೊಬ್ಬರು ಕೈಜಾರಿ ಬಾವಿಗೆ ಬಿದ್ದು‌ ಮೃತ್ಯು…!!

ವ್ಯಕ್ತಿಯೊಬ್ಬರು ಕೈಜಾರಿ ಬಾವಿಗೆ ಬಿದ್ದು‌ ಮೃತ್ಯು…!!

ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ವ್ಯಕ್ತಿಯೊಬ್ಬರು ತನ್ನ ತೋಟದಲ್ಲಿರುವ ಬಾವಿಯ ಕೆಸರು‌ ತೆಗೆಯಲು ಹೋಗಿ ಆಕಸ್ಮಿಕವಾಗಿ ಕೈಜಾರಿ ಬಾವಿಗೆ‌ ಬಿದ್ದು ಗಂಭೀರ ಗಾಯಗೊಂಡು‌ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿ ಪದ್ದು‌ ಕುಂಬಾರ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ:  ಪಿರ್ಯಾದಿ ಮಂಜುನಾಥ ಕುಂಬಾರ (45) ಬೆಳ್ವೆ ಗ್ರಾಮ, ಹೆಬ್ರಿ ತಾಲೂಕು ಇವರ ತಂದೆ ಪದ್ದು ಕುಂಬಾರ (75) ವರ್ಷ ರವರು ದಿನಾಂಕ 27/05/2026 ರಂದು ಫಿರ್ಯಾದಿದಾರೊಂದಿಗೆ ಬೆಳಿಗ್ಗೆ 9:30 ಗಂಟೆಗೆ ತೋಟದಲ್ಲಿರುವ ಬಾವಿಯ ಕೆಸರನ್ನು ತೆಗೆಯಲು ಕೆಲಸದವರನ್ನು ಕರೆದುಕೊಂಡು ತೋಟದಲ್ಲಿದ್ದ ಬಾವಿಗೆ ಹೋಗಿ ಬಾವಿಗೆ ಇಳಿದು ಕೆಸರನ್ನು ತೆಗೆದು ಮೇಲಕ್ಕೆ ಹಾಕಿ ಹಗ್ಗದ ಸಹಾಯದಿಂದ ಮೇಲಕ್ಕೆ ಬರುವ ವೇಳೆ ಹಗ್ಗವು ಕೆಸರಾಗಿದ್ದರಿಂದ ಆಕಸ್ಮಿಕವಾಗಿ ಕೈಜಾರಿ ಪುನ: ಬಾವಿಗೆ ಬಿದ್ದಿದ್ದು, ಆಗ ಅಲ್ಲಿ ನಿಂತಿದ್ದ ಫಿರ್ಯಾದಿದಾರರ ತಾಯಿ ಗಿರಿಜಾ ರವರು ಫಿರ್ಯಾದಿದಾರರನ್ನು ಹಾಗೂ ಶೇಖರ್ ರವರನ್ನು ಕೊಗಿ ಕರೆದರು ಆವರ ಸಹಾಯದಿಂದ ಪದ್ದು ಕುಂಬಾರ್ ರವರನ್ನು ಬಾವಿಯಿಂದ ಮೇಲಕ್ಕೆತ್ತಿ ಉಪಚರಿಸಿದ್ದು ಆಗ ಸಮಯ ಮಧ್ಯಾಹ್ನ 1:00 ಗಂಟೆಯಾಗಿದ್ದು, ಪದ್ದು ಕುಂಬಾರ್‌ ರವರ ಬಲಬದಿಯ ತೋಡೆಯ ಮೂಳೆ ಹಾಗು ತಲೆಯ ಹಿಂಬದಿ ಪೆಟ್ಟಾಗಿದ್ದು, ಕೂಡಲೇ ಅವರನ್ನು ಕೋಟೇಶ್ವರ ಎನ್.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ ಎಮ್‌ ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆ ಎಎಮ್‌ ಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುವಾಗ ದಿನಾಂಕ 30-05-2026 ಬೆಳಗ್ಗೆ 3:30 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.