ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ವ್ಯಕ್ತಿಯೊಬ್ಬರು ಮನೆಯಿಂದ ಹೊರಗೆ ಹೋದವರು ವಾಪಸ್ಸು ಬಾರದೇ ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ನಾವುಂದ ಗ್ರಾಮದ ನಿವಾಸಿ ಗಣಪ ಎಂದು ತಿಳಿಯಲಾಗಿದೆ.
ಈ ಘಟನೆ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಸುಬ್ರಹ್ಮಣ್ಯ(48), ನಾವುಂದ ಗ್ರಾಮ ಬೈಂದೂರು ಇವರ ತಂದೆ ಗಣಪ (74) ರವರು ದಿನಾಂಕ 19/07/2025 ರಂದು ಸಂಜೆ 18:00 ಗಂಟೆಗೆ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೇ ಇದ್ದು ನೆರೆ-ಕೆರೆಯಲ್ಲಿ ನಾವುಂದ ಪೇಟೆ ಹಾಗೂ ಸಮುದ್ರ ಅಂಚಿನಲ್ಲಿ ಹುಡುಕಾಡಿದರು ಪತ್ತೆಯಾಗಿರುವುದ್ದಿಲ್ಲ
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 138/2025 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.