Home Crime ವ್ಯಕ್ತಿಯೊಬ್ಬರಿಂದ ಗೂಗಲ್ ಪೇ ನ ಮಾಹಿತಿ ಪಡೆದು ಲಕ್ಷಾಂತರ ರೂಪಾಯಿ ವಂಚನೆ…!!

ವ್ಯಕ್ತಿಯೊಬ್ಬರಿಂದ ಗೂಗಲ್ ಪೇ ನ ಮಾಹಿತಿ ಪಡೆದು ಲಕ್ಷಾಂತರ ರೂಪಾಯಿ ವಂಚನೆ…!!

ಉಡುಪಿ: ವ್ಯಕ್ತಿಯೊಬ್ಬರಿಂದ ಗೂಗಲ್ ಪೇ ನ ಮಾಹಿತಿ ಪಡೆದು ಅವರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.

ವಂಚನೆಗೆ ಒಳಗಾದವರು ಲೋಕನಾಥ್ ಬಂಗೇರ ಎಂದು ತಿಳಿದು ಬಂದಿದೆ.

ಪ್ರಕರಣ ವಿವರ : ಫಿರ್ಯಾದಿ ಲೋಕನಾಥ್ ಬಂಗೇರ, ಪ್ರಾಯ : 68 ವರ್ಷ, ಕುತ್ಪಾಡಿ ಉಡುಪಿ ಇವರು ದಿನಾಂಕ :19/07/2025 ರಂದು ಬೆಳಿಗ್ಗೆ 10 ಗಂಟೆಗೆ ಮನೆಯಲ್ಲಿರುವಾಗ ಜಿಯೋ ಹಾಟ್‌ ಸ್ಟಾರ್‌ ಚಂದಾದಾರಿಕೆಯನ್ನು ರದ್ದುಗೊಳಿಸಲು ಗೂಗಲ್‌ ನಲ್ಲಿ ಜಿಯೋ ಹಾಟ್‌ ಸ್ಟಾರ್‌ ನ ಹೆಲ್ಪ್‌ ಲೈನ್‌ ನಂಬರ್‌ ನ್ನು ಹುಡುಕಾಟ ನಡೆಸಿದಾಗ ನಂಬ್ರ 8667041849 ದೊರೆತಿದ್ದು, ನಂತರ ಆ ನಂಬರ್‌ ಗೆ ಕರೆಮಾಡಿದಾಗ ಅಪರಿಚಿತ ವ್ಯಕ್ತಿಯು ಮತ್ತೋರ್ವ ಅಪರಿಚಿತ ವ್ಯಕ್ತಿಯ ನಂಬ್ರ 8981509398 ಗೆ ಕರೆಯನ್ನು ವರ್ಗಾಯಿಸಿದ್ದು, ಆ ಸಮಯ ಫಿರ್ಯಾದುದಾರರು ಅತನಿಗೆ ಜಿಯೋ ಹಾಟ್‌ ಸ್ಟಾರ್‌ ನ ಚಂದಾದಾರಿಕೆಯನ್ನು ರದ್ದುಗೊಳಿಸಬೇಕಾಗಿದೆ ಎಂದು ಹೇಳಿದಾಗ ಆತನು ಫಿರ್ಯಾದುದಾರರ ಗೂಗಲ್‌ ಪೇ ನ ಮಾಹಿತಿಯನ್ನು ಪಡೆದು ಫಿರ್ಯಾದುದಾರರಿಗೆ ಗೊತ್ತಿಲ್ಲದೇ ಒಟಿಪಿಗಳನ್ನು ಪಡೆದು ಫಿರ್ಯಾದುದಾರರ ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ ಖಾತೆ ಹಾಗೂ ಸರಸ್ವತ್‌ ಬ್ಯಾಂಕ್‌ ಖಾತೆ ರಿಂದ ಕ್ರಮವಾಗಿ 99,500/-ರೂಪಾಯಿ ಮತ್ತು 60,000/- ರೂಪಾಯಿ ಒಟ್ಟಾರೆಯಾಗಿ 1,59,500/- ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾನೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 134/2025, ಕಲಂ: 318(4) BNS 66(D) IT act ನಂತೆ ಪ್ರಕರಣ ದಾಖಲಾಗಿರುತ್ತದೆ