ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ನಾವರ ಸಮೀಪ ಶಿರೂರು ಮೂರು ಕೈ ಪೇಟೆಯ ನೀರ್‌ಜೆಡ್ಡು ಎಂಬಲ್ಲಿ ರಸ್ತೆ ಬದಿ ದನವನ್ನು ವಾಹನದಲ್ಲಿ ಕಳವು ಮಾಡಿಕೊಂಡು ಹೋದ ಪ್ರಕರಣದ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮುಜಾಫಿರ್ ಹಾಗೂ ರಾಮ ನಾಯ್ಕ ಎಂದು ಗುರುತಿಸಲಾಗಿದೆ.
ಮುಜಾಪಿರ್‌ನನ್ನು ಹೈಕಾಡಿ ಯಲ್ಲಿ ಹಾಗೂ ರಾಮ ನಾಯ್ಕ ನನ್ನು ನೀರುಜೆಡ್ಡುವಿನಲ್ಲಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.