Home Crime ಕುಂದಾಪುರ : ವ್ಯಕ್ತಿಯೋರ್ವರು ಮನೆಗೆ ಬಾರದೆ ನಾಪತ್ತೆ…!!

ಕುಂದಾಪುರ : ವ್ಯಕ್ತಿಯೋರ್ವರು ಮನೆಗೆ ಬಾರದೆ ನಾಪತ್ತೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ತೆಕ್ಕಟ್ಟೆ ಗ್ರಾಮದ ನಿವಾಸಿಯೊಬ್ಬರು‌ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದವರು ಗಣಪತಿ ಎಂದು ತಿಳಿಯಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ಸಾರಾಂಶ : ಪಿರ್ಯಾದಿರರಾದ ನವೀನ ಕುಮಾರ (25), ತೆಕ್ಕಟ್ಟೆ ಗ್ರಾಮ ಕುಂದಾಪುರ ಇವರ ತಂದೆ ಗಣಪತಿ (57) ರವರು ದರ್ಮಸ್ಥಳದ ಸಿರಿ ಗ್ರಾಮೊದ್ಯೋಗ ಸಂಸ್ಥೆ ಕುಂದಾಪುರ ಶಾಖೆ ಯಲ್ಲಿ ಹೋಂ ಪ್ರಾಡೆಕ್ಟ ಡಿಸ್ಟಿಬ್ಯೂಟರ್ ಆಗಿ ಸುಮಾರು 8 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ದಿನಾಂಕ 18/07/2025 ರಂದು ಬೆಳಿಗ್ಗೆ 08:00 ಗಂಟೆಯ ಸಮಯಕ್ಕೆ ಮನೆಯಿಂದ ಮೊಟಾರ್ ಸೈಕಲ ನಂಬ್ರ KA-20-ER-9557 ರಲ್ಲಿ ಹೋದವರು ಹೆರಿಕುದ್ರುವಿನ ಹೋಂ ಪ್ರಾಡೆಕ್ಟ ಗೋಡನ್ ಗೆ ಹೋಗಿ ನಂತರ 11:00 ಗಂಟೆಯ ಸಮಯ ಕುಂದಾಪುರದ ಶಾಸ್ತ್ರಿ ಪಾರ್ಕ ಬಳಿ ಮೊಟರ್ ಸೈಕಲ್ ನಿಲ್ಲಿಸಿ ಹೋದವರು ಮನೆಗೆ ಬಾರದೆ ಇದ್ದು ಮೊಬೈಲ್ ಗೆ ಕರೆ ಮಾಡಿದಲ್ಲಿ ಸ್ವಿಚ್ ಆರ್ಪ ಆಗಿರುತ್ತದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 89/2025 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.