ಬ್ರಹ್ಮಾವರ: ನಿರಂತರ 216 ಗಂಟೆಗಳ ಕಾಲ ಭರತ ನಾಟ್ಯ ಪ್ರದರ್ಶನ ಮಾಡಿ ವಿಶ್ವದಾಖಲೆ ಮಾಡಿದ ಬ್ರಹ್ಮಾವರ ಸಮೀಪ ಆರೂರು ಮೇಲಡ್ಪು ವಿಠಲ ಪೂಜಾರಿ ಮತ್ತು ಶುಭ ದಂಪತಿ ಪುತ್ರಿ ವಿದುಷಿ ದೀಕ್ಷಾ ವಿ. ಅವರನ್ನು ಶ್ರೀ ನಾರಾಯಣಗುರು ವಿಚಾರ ವೇದಿಕೆ ಕರ್ನಾಟಕ ವತಿಯಿಂದ ಸೋಮವಾರ ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಭರತನಾಟ್ಯ ಕಲಾವಿದರು ಭಾರತದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ, ವಿಶ್ವ ಮಟ್ಟದಲ್ಲಿ ಅದ್ಭುತ ಸಾಧನೆ ಮತ್ತು ದಾಖಲೆ ಮಾಡಿದ ಬಿಲ್ಲವ ಸಮಾಜದ ಕುವರಿ ದೀಕ್ಷಾ ಅಸಾಧ್ಯವಾದುದನ್ನು ಸಾಧ್ಯ ಮಾಡಿದರು ಎಂದರು.
ಸಮಿತಿಯ ಪದಾಧಿಕಾರಿಗಳಾದ ಅಚ್ಯುತ ಅಮೀನ್ ಕಲ್ಮಾಡಿ, ಹೊದೋಳ ಶಿವು, ಮುಡುಬ ರಾಘವೇಂದ್ರ, ಸಂದೀಪ್ ಪಂಪ್‌ವೆಲ್, ರಾಜು ಪೂಜಾರಿ ಉಳ್ಳೂರು, ಜಗನ್ನಾಥ ಕೋಟೆ, ಪ್ರದೀಪ್ ಸನಿಲ್ ಉಡುಪಿ, ಕರುಣಾಕರ ಪೂಜಾರಿ ಬ್ರಹ್ಮಾವರ, ಶಶಿಧರ ಅಮೀನ್ ಉಡುಪಿ ಸುಧಾಕರ್ ರಾವ್ ಬಾರ್ಕೂರ್. ಸಂದೀಪ್. ಸುಬ್ರಮಣ್ಯ ಬಾರ್ಕೂರ್. ಮಹೇಶ್ ಉಪ್ಪರ್ ಮತ್ತಿತರರು ಉಪಸ್ಥಿತರಿದ್ದರು.