Home Crime ಕಾರ್ಕಳ : ಬೈಕ್ ಕಳವು…!!

ಕಾರ್ಕಳ : ಬೈಕ್ ಕಳವು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ವ್ಯಕ್ತಿಯೊಬ್ಬರು ಮನೆಯ ಹತ್ತಿರದ ಅಂಗಡಿಯ ಎದುರು ನಿಲ್ಲಿಸಿದ್ದ ಬೈಕ್ ನ್ನು ಯಾರೂ ಕಳ್ಳರು‌ ಕಳವು ಮಾಡಿದ ನಡೆದಿದೆ.

ಸತೀಶ್ ಆಚಾರ್ಯ ಎಂಬವರ ಬೈಕ್ ಕಳವು‌ ಆಗಿದೆ.

ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ದಿನಾಂಕ 15/11/2025 ರಂದು ರಾತ್ರಿ 20:00 ಗಂಟೆಗೆ ಪಿರ್ಯಾದಿದಾರರಾದ ಸತೀಶ್‌ ಆಚಾರ್ಯ (44), ಯರ್ಲಪಾಡಿ ಗ್ರಾಮ, ಕಾರ್ಕಳ ಇವರ ಮಾಲೀಕತ್ವದ ಮೋಟಾರ್‌ ಸೈಕಲ್‌ ನಂಬ್ರ KA-19-EH-3909 ನೇಯದನ್ನು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ತುಂಬೆಹಿತ್ಲು ಬಾಡಿಗೆ ಮನೆಯ ಕೆಳ ಅಂತಸ್ತಿನ ಅಂಗಡಿಯ ಎದುರು ನಿಲ್ಲಿಸಿದ್ದು ದಿನಾಂಕ 17/11/2025 ಬೆಳಗ್ಗೆ 08:30 ಗಂಟೆಗೆ ವಾಪಸ್ಸು ಬಂದು ನೋಡಿದಾಗ ಯಾರೋ ಕಳ್ಳರು ನಿಲ್ಲಿಸಿದ್ದ KA-19-EH-3909 ನೇ ಮೋಟಾರ್‌ ಸೈಕಲ್‌ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 165/2025 ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.