ಮಂಗಳೂರು : ಬಹುಮುಖ ಪ್ರತಿಭೆ, ಯುವ ವಕೀಲೆಯೋರ್ವರು ಅಲ್ಪಕಾಲದ ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ಜುಲೈ 25ರಂದು ನಡೆದಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಪ್ಪತ್ತ ನಾಲ್ಕು ವರ್ಷದ ರಾಜಶ್ರೀ ಜೆ.ಪೂಜಾರಿ ವಿಧಿವಶರಾದ ಯುವತಿ. ಬರಹಗಾರ್ತಿ, ಸಾಹಿತಿ, ನಿರೂಪಕಿಯಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು.
ಇವರ ಪ್ರತಿಭೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು. ಬೆನ್ನಿಗೆ ಸಂಬಂಧಿಸಿದ್ದ ಖಾಯಿಲೆ ಇವರನ್ನು ಬಾಧಿಸಿದ್ದು ಚಿಕಿತ್ಸಾ ವೆಚ್ಚಕ್ಕೆ ದೇಣಿಗೆ ಸಂಗ್ರಹವನ್ನು ಕೂಡಾ ಮಾಡಲಾಗುತ್ತಿತ್ತು.ದುರಾದೃಷ್ಟವಶಾತ್ ಬಾಳಿ ಬದುಕಬೇಕಾಗಿದ್ದ ಜೀವ ವಿಧಿಯಾಟಕ್ಕೆ ಬಲಿಯಾಗಿದೆ.
