ಉಡುಪಿ: ನಗರದ ಸಮೀಪ ಮಹಿಳೆಯೊಬ್ಬರು ಚೂಡಿದಾರ್ ದುಪ್ಪಟ್ಟದಿಂದ ಒಂದು ಬದಿಯನ್ನು ಫ್ಯಾನಿಗೆ ಬಿಗಿದು ಇನ್ನೊಂದು ತುದಿಯನ್ನು ಕೊರಳಿಗೆ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆ ಮೂಡನಿಡಂಬೂರು ನಿವಾಸಿ ಶೋಭಲತಾ ಎಂದು ತಿಳಿದು ಬಂದಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಜಗದೀಶ್ ಕುಮಾರ್ (61), ಮೂಡನಿಡಂಬೂರು ಗ್ರಾಮ, ಉಡುಪಿ ಇವರ ಹೆಂಡತಿ ಶೋಭಲತಾ (48) ರವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೋರ್ಟ್ ಹಿಂಬದಿ ರಸ್ತೆಯಲ್ಲಿರುವ ವಿಶ್ವಾಸ್ ಟವರ್ಸ್ ನ ಫ್ಲಾಟ್ ನಂಬ್ರ 803 ರಲ್ಲಿ ವಾಸಮಾಡಿಕೊಂಡಿದ್ದು, ಶೋಭಲತಾ ರವರಿಗೆ ಬಲಕಿವಿ ತಮಟೆಯಲ್ಲಿ ಸಮಸ್ಯೆ ಇದ್ದುದ್ದರಿಂದ ದಿನಾಂಕ 21/05/2025 ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕಿವಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಶಸ್ತ್ರ ಚಿಕಿತ್ಸೆಯ ನಂತರ ಶೋಭಲತಾ ರವರು ಪಿರ್ಯಾದಿದಾರರಲ್ಲಿ ಬಲಕಿವಿ ಬಂದ್ ಇರುವ ಹಾಗೆ ಅನಿಸುತ್ತಿರುವುದಾಗಿ ತಿಳಿಸಿದ್ದು, ಇದೇ ವಿಚಾರವಾಗಿ ಶೋಭಲತಾ ರವರು ಮಾನಸಿಕ ಖಿನ್ನತೆಗೆ ಜಾರಿರುತ್ತಾರೆ. ದಿನಾಂಕ 16/07/2025 ರಂದು ಸಂಜೆ 18:00 ಗಂಟೆಗೆ ಶೋಭಲತಾ ರವರು ಮಲಗಿದ್ದು ಪಿರ್ಯಾದಿದಾರರು ರಾತ್ರಿ 22:00 ಗಂಟೆಗೆ ಮಲಗಿರುತ್ತಾರೆ.ದಿನಾಂಕ 17/07/2025 ರಂದು ಪಿರ್ಯಾದಿದಾರರು ಬೆಳಗ್ಗೆ 6:00 ಗಂಟೆಗೆ ಎದ್ದು ನೋಡುವಾಗ ಶೋಭಲತಾ ರವರು ಮಲಗಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು ನಂತರ ಅಡುಗೆ ಕೋಣೆಗೆ ಹೋಗಿ ನೋಡಿದಾಗ ಶೋಭಾಲತಾ ರವರು ಚೂಡಿದಾರ್ ದುಪ್ಪಟ್ಟದಿಂದ ಒಂದು ಬದಿಯನ್ನು ಫ್ಯಾನಿಗೆ ಬಿಗಿದು ಇನ್ನೊಂದು ತುದಿಯನ್ನು ಕೊರಳಿಗೆ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿದ್ದವರನ್ನು ಸರ್ಕಾರಿ ಜಿಲ್ಲಾಸ್ಪತ್ರೆ ಅಜ್ಜರಕಾಡು ಉಡುಪಿಗೆ ಕರೆದುಕೊಂಡು ಹೋಗಿದ್ದು, ಅವರನ್ನು ಪರೀಕ್ಷಿಸಿದ ವೈದ್ಯಾದಿಕಾರಿಗಳು ಅದಾಗಲೇ ಮೃತಪಟ್ಟಿರುವುದಾಗಿ ಬೆಳಗ್ಗೆ 8:00 ಗಂಟೆಗೆ ತಿಳಿಸಿರುತ್ತಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 66/2025 , ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.