ಉಡುಪಿ: ನಗರದ ಸಂಚಾರ ಪೊಲೀಸ್ ಉಪನಿರೀಕ್ಷಕರಿಗೆ ಓಮ್ನೀ ಕಾರು ಚಾಲಕನೊಬ್ಬ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಕುರಿಯನ್ ಎಂಬ ಕಾರು ಚಾಲಕ ಪೊಲೀಸರ ಕರ್ತವ್ಯಕೆ ಅಡ್ಡಿ ಪಡಿಸಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರು ಕಾರು ಚಾಲನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ: ದಿನಾಂಕ 17/07/2025 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಹುಸೇನಸಾಬ ಕಾಶಿಮಸಾಬ ಚಪ್ಪರಕರ,ಪೊಲೀಸ್ ಉಪನಿರೀಕ್ಷಕರು-2, ಉಡುಪಿ ಸಂಚಾರ ಪೊಲೀಸ್ ಠಾಣೆ ಇವರು ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ 11:30 ಗಂಟೆಗೆ ಅಂಬಲಪಾಡಿ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ KA-19-MG-3705 ನೇ ಓಮ್ನೀ ಕಾರಿನ ಚಾಲಕನು ಸೀಟ್ ಬೆಲ್ಟ್ ಧರಿಸದೇ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಠಾಣಾ ಸಿಬ್ಬಂದಿಗೆ ಕಾರನ್ನು ನಿಲ್ಲಿಸಲು ತಿಳಿಸಿದ್ದು, ಅದರಂತೆ ಚಾಲಕ ಕಾರನ್ನು ನಿಲ್ಲಿಸಿದಾಗ ಚಾಲಕನ ಬಳಿ ಹೋಗಿ ಹೆಸರು,ವಿಳಾಸ ಹಾಗೂ ವಾಹನ ಚಾಲನಾ ಪ್ರಮಾಣ ಪತ್ರವನ್ನು ತೋರಿಸುವಂತೆ ಹೇಳಿದಾಗ ಚಾಲಕನು ಏರು ಧ್ವನಿಯಲ್ಲಿ ನಾನು ಯಾವುದೇ ದಾಖಲಾಗಿ ನೀಡುವುದಿಲ್ಲ ಎಂದು ಹೇಳಿದ್ದು ಆಗ ಸೀಟ್ ಬೆಲ್ಟನ್ನು ಧರಿಸದೇ ವಾಹನವನ್ನು ಚಾಲನೆ ಮಾಡುತ್ತಿದ್ದೀರಿ ಅದಕ್ಕಾಗಿ ನಿಮ್ಮ ವಾಹನವನ್ನು ನಿಲ್ಲಿಸಿರುತ್ತೇವೆ ಎಂದು ಹೇಳಿದರೂ ಕೂಡ ಚಾಲಕನು ದಾಖಲಾತಿ ನೀಡದೇ ಚಲಾಯಿಸಿಕೊಂಡು ಹೋಗಲು ಮುಂದಾದಾಗ ವಾಹನದ ಮುಂದೆ ಹೋದಾಗ ಚಾಲಕನು ವಾಹನವನ್ನು ನಿಲ್ಲಿಸಿದ್ದು. ನಂತರ ಚಾಲಕನ ವಾಹನ ಚಾಲನಾ ಪ್ರಮಾಣ ಪತ್ರ ದಾಖಲಾತಿ ನೋಡಿದ್ದು, ಅದರಲ್ಲಿ ಚಾಲಕನ ಹೆಸರು ಕುರಿಯನ್ ಎಂಬುದಾಗಿ ಇದ್ದು, ಆತನಿಗೆ ಪೊಲೀಸ್ ನೋಟೀಸ್ ರಶೀದಿಯಲ್ಲಿ ಸಹಿ ಮಾಡಿ ದ್ವಿಪ್ರತಿಯಲ್ಲಿ ಸಹಿಮಾಡುವಂತೆ ನೋಟೀಸ್ ನ್ನು ಕುರಿಯನ್ ಗೆ ನೀಡಿದಾಗ ನಾನು ಸಹಿ ಮಾಡುವುದಿಲ್ಲ ಎಂದು ಪಿರ್ಯಾದಿದಾರರ ಕೈಯಲ್ಲಿದ್ದ ವಾಹನ ಚಾಲನ ಪ್ರಮಾಣಪತ್ರವನ್ನು ಕಿತ್ತುಕೊಳ್ಳಲು ಕೈ ಮೇಲೆ ಹಠಾತ್ ದಾಳಿ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2025, ಕಲಂ: 132 BNS ರಂತೆ ಪ್ರಕರಣ ದಾಖಲಾಗಿರುತ್ತದೆ.