Udupi : ಭಾವಿ ಪರ್ಯಾಯ ಶ್ರೀ ಶಿರೂರು ಮಠದ ಕಟ್ಟಿಗೆ ಮಹೂರ್ತ ಜುಲಾಯಿ ೧೩ ರಂದು ನಡೆಯಲಿದೆ. ಇದರ ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗು ಬಿ ಎಲ್ ಸಂತೋಷ್ ರವರನ್ನು ಭೇಟಿಯಾಗಿ ಶ್ರೀಮಠದ ಪಾರ್ಪತ್ತಿಗಾರರಾದ ಶ್ರೀಶ ಭಟ್ ಕಡೆಕಾರ್ ಆಮಂತ್ರಣ ನೀಡಿದರು.
ಇರ್ವರೂ ಸಂತೋಷ ವ್ಯಕ್ತಪಡಿಸಿ, ತಾವು ಬರುವುದಾಗಿ ಹಾಗು ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುರೋಹಿತ ಆನಂದ ಭಟ್ ಹೇರೂರು ಉಪಸ್ಥಿತರಿದ್ದರು.

