Home Crime ಮೈಸೂರು : ಕಾರ್ತಿಕ್ ಹತ್ಯೆ ಪ್ರಕರಣ : ಮಹಿಳೆ ಸೇರಿ 7 ಮಂದಿಯ ಬಂಧನ…!!

ಮೈಸೂರು : ಕಾರ್ತಿಕ್ ಹತ್ಯೆ ಪ್ರಕರಣ : ಮಹಿಳೆ ಸೇರಿ 7 ಮಂದಿಯ ಬಂಧನ…!!

ಮೈಸೂರು: ನಗರ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮಹಿಳೆ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ ‌

ವರುಣಾ ಗ್ರಾಮದ ಸಮೀಪದ ಹೋಟೆಲ್ ಮುಂಭಾಗದಲ್ಲಿ ರವಿವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ಕಾರ್ತಿಕ್ ನನ್ನು ಕೊಲೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಿದ್ದ ಪೊಲೀಸರು 7 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ತಿಕ್ ಕೊಲೆಗೆ ಮಹಿಳೆಯ ವಿಚಾರವೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರವೀಣ್, ಅವಿನಾಶ್, ರವಿ, ಚಂದ್ರು, ಆನಂದ, ವೆಂಕಟೇಶ್ ಶೆಟ್ಟಿ ಎಂಬವರನ್ನು ಬಂಧಿಸಲಾಗಿದೆ.

ಪ್ರವೀಣ್ ಹಾಗೂ ಕಾರ್ತಿಕ್ ನಡುವೆ ಮಹಿಳೆ ವಿಚಾರದಲ್ಲಿ ಗಲಾಟೆ ಆಗಿತ್ತು. ರೌಡಿ ಶೀಟರ್ ಕಾರ್ತಿಕ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿ ತಿಳಿಸಿದ್ದಾರೆ.