Home Crime ಕಾರ್ಕಳ : ಸಾಣೂರು ಬಳಿ ರಸ್ತೆ ಅಪಘಾತ – ಸ್ಕೂಟರ್ ಸವಾರ ಮೃತ್ಯು..!

ಕಾರ್ಕಳ : ಸಾಣೂರು ಬಳಿ ರಸ್ತೆ ಅಪಘಾತ – ಸ್ಕೂಟರ್ ಸವಾರ ಮೃತ್ಯು..!

ಕಾರ್ಕಳ: ಟೆಂಪೊ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರರು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಮಾರ್ಚ್ 29 ರಂದು ಬೆಳಿಗ್ಗೆ ಸುಮಾರು 9:20 ಗಂಟೆ ವೇಳೆಗೆ, ಸಾಣೂರು ಗ್ರಾಮದ ರಾಮಮಂದಿರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಕೆರ್ವಾಸಿ ಮೂಲದ ಜಯಾನಂದ ಶೆಟ್ಟಿ ಅವರು ತಮ್ಮ  ಸ್ಕೂಟರ್‌ನಲ್ಲಿ ಸಾಣೂರಿನಿಂದ ಕಾರ್ಕಳ ಕಡೆಗೆ ಬರುತ್ತಿದ್ದರು.

ಈ ವೇಳೆ ಚಿಲಿಂಬಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ  ಟೆಂಪೊವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಡಿಕ್ಕಿಯ ಪರಿಣಾಮ ಜಯಾನಂದ ಶೆಟ್ಟಿ ಅವರು ರಸ್ತೆ ಮೇಲೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದಾರಿಯ ಮಧ್ಯೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.