Home Art & Entertainment ಹಂಸಲೇಖ ಅವರ ಸಂಗೀತ ಸಾಧನೆಗೆ ಶೈಕ್ಷಣಿಕ ಗೌರವ : ಈಶ್ವರ್ ರವರಿಗೆ ಪಿಎಚ್.ಡಿ ಪದವಿ ಘೋಷಣೆ…!!

ಹಂಸಲೇಖ ಅವರ ಸಂಗೀತ ಸಾಧನೆಗೆ ಶೈಕ್ಷಣಿಕ ಗೌರವ : ಈಶ್ವರ್ ರವರಿಗೆ ಪಿಎಚ್.ಡಿ ಪದವಿ ಘೋಷಣೆ…!!

ಬೆಂಗಳೂರು : ಮಾ.10: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ನಿವಾಸಿ, ಹಾಲಿ ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಸಂಶೋಧನಾರ್ಥಿ ಈಶ್ವರ್ ರವರಿಗೆ ಪಿಎಚ್.ಡಿ ಪದವಿ ಘೋಷಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರ ಮಾರ್ಗದರ್ಶನದಲ್ಲಿ ವಿವಿಗೆ ಮಂಡಿಸಿದ “ಕನ್ನಡ ಚಿತ್ರರಂಗಕ್ಕೆ ಹಂಸಲೇಖ ರವರ ಕೊಡುಗೆ: ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಘೋಷಿಸಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದೆ ಮಾತ್ರವಲ್ಲ (ಮೌಲ್ಯಮಾಪನ) ವಿಭಾಗದ ಕುಲ‌ಸಚಿವ ಪ್ರೊ. ಚಂದ್ರಶೇಖರ ಎಸ್. ಕರಿಗಾರ ಅವರು ಡಾಕ್ಟರೇಟ್ ಘೋಷಣೆಯ ಅಧಿಸೂಚನೆ ಪತ್ರವನ್ನು ಡಾ. ಈಶ್ವರ್ ರವರಿಗೆ ನೀಡಿ ಅಭಿನಂದಿಸಿದರು.

ಈ ಹಿನ್ನೆಲೆಯಲ್ಲಿ ಡಾ. ಈಶ್ವರ್ ಅವರು ಸಿರಿಗೇರಿ ಗ್ರಾಮದ ದಿವಂಗತ ಛಲವಾದಿ ತಿಪ್ಪಣ್ಣ, ಛಲವಾದಿ ಹುಲಿಗೇಮ್ಮ ದಂಪತಿಯ ಹಿರಿಯ ಪುತ್ರ. ಕೊರೋನಾ ಸಂದರ್ಭದಲ್ಲಿ ಕೆಲವೇ ತಿಂಗಳುಗಳ‌ ಅವಧಿಯಲ್ಲಿ ಅಪ್ಪ ಅಮ್ಮ ಸಾವನ್ನಪ್ಪಿದರೂ ಧೃತಿಗೆಡದೆ ಅದ್ಯಯನ ಮುಂದುವರೆಸಿ ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ವಿಶೇಷ. ಈ ಮೂಲಕ ಸಂಶೋಧನೆ ಮಾಡುವ ಯುವಕರಿಗೆ ಪ್ರೇರಣೆಯಾಗಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ 5ನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದಾರೆ. ಬಳಿಕ ಇದೇ ವಿಭಾಗದಲ್ಲಿ ಸಂಶೋಧನೆಯನ್ನು ಮುಂದುವರೆಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ ವೃತ್ತಿಪರ ಅನುಭವ ಹೊಂದಿದ್ದಾರೆ.

ಅಭಿನಂದನೆ: ಡಾ. ಈಶ್ವರ್ ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಹಾಗೂ ಸಿರಿಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶುಭ ಕೋರಿದ್ದಾರೆ.

ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಮಂಡ್ಯ ಅನನ್ಯ ಮಾಧ್ಯಮ ತರಬೇತಿ ಕೇಂದ್ರದ ಮುಖ್ಯಸ್ಥ ರಾಜೇಶ್ ರಾಂಪುರ ಡಾ. ಈಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಶೋಧನಾ ಮಹಾಪ್ರಬಂಧವು ಕನ್ನಡ ಚಿತ್ರರಂಗದಲ್ಲಿ ಇದೊಂದು ಹೊಸ ಮೈಲುಗಲ್ಲು ಮತ್ತು ವಿಶಿಷ್ಟ ದಾಖಲೆಯಾಗಿದೆ. ಸಿನಿಮಾ ರಂಗದ ಹಲವಾರು ಪರಿಣಿತರು, ಸಿನಿಮಾ ಪತ್ರಕರ್ತರು, ಸಿನಿಮಾ ಕಲಾವಿದರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಸೇರಿದಂತೆ ಕನ್ನಡ ಸಿನಿಮಾದ ವಿವಿಧ ಸಂಘಗಳು, ಹಂಸಲೇಖ ರವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಸಮಗ್ರವಾಗಿ ಸಂಶೋಧನೆ ನಡೆಸಿರುವ ಮಹಾಪ್ರಬಂಧದ ಕುರಿತು ಹರ್ಷ ವ್ಯಕ್ತಪಡಿಸಿ ಪ್ರಶಂಸಿದ್ದಾರೆ.