ಗಂಗೊಳ್ಳಿ: ಹಕ್ಲಾಡಿ ಗ್ರಾಮದ ನಿವಾಸಿಯಾಗಿರುವ ರವೀಂದ್ರ (41) ಎಂಬವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಪಿರ್ಯಾದಿದಾರರಾದ ಶ್ರೀಧರ್ ಚಂದನ್ (60) ಅವರ ಪುತ್ರ ರವೀಂದ್ರ ಮಂಗಳೂರಿನಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರು ದಿನಾಂಕ 25/03/2026 ರಂದು ಬೆಳಿಗ್ಗೆ ಸುಮಾರು 6:30 ಗಂಟೆಗೆ ಮನೆಯಾದ ಹಕ್ಲಾಡಿ ಗ್ರಾಮದ ಬ್ರಹ್ಮಲಿಂಗೇಶ್ವರ ಅನುಗ್ರಹ ನಿವಾಸದಿಂದ ತನ್ನ KA-20 HF-4557 ನಂಬರಿನ ಮೋಟಾರ್ ಸೈಕಲ್‌ನಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದರು. ಆದರೆ ನಂತರ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದರು.
ಈ ನಡುವೆ ದಿನಾಂಕ 27/03/2026 ರಂದು ಮಧ್ಯಾಹ್ನ ಸುಮಾರು 12:30 ಗಂಟೆಗೆ ಕುಂದಬಾರಂದಾಡಿ ಗ್ರಾಮದ ತೊರೊಳ್ಳಿಯ ಚಕ್ರ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮಕ್ಕಳು ಆಗದೆ ಇರುವ ವಿಚಾರದಿಂದ ಚಿಂತೆಗೆ ಒಳಗಾಗಿ ಹಾಗೂ ವಿಪರೀತ ಮದ್ಯ ಸೇವನೆಯಿಂದ ಜೀವನದಲ್ಲಿ ಜುಗುಪ್ಸೆಗೊಂಡು ರವೀಂದ್ರ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 08/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





