Home Kundapura News ಕುಂದಾಪುರ: ಪತಿಯೊಂದಿಗೆ ಜಗಳವಾಡಿಕೊಂಡು ಹಾಲಾಡಿ, ಹೊಳೆಗೆಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

ಕುಂದಾಪುರ: ಪತಿಯೊಂದಿಗೆ ಜಗಳವಾಡಿಕೊಂಡು ಹಾಲಾಡಿ, ಹೊಳೆಗೆಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ, ಪತಿಯೊಂದಿಗೆ ಜಗಳವಾಡಿಕೊಂಡು ಹಾಲಾಡಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೋಗಿರುವುದಾಗಿ ತಿಳಿದು ತಕ್ಷಣ ಪತಿರಾಯ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

 

ತಕ್ಷಣ 112 ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆ ಮತ್ತು ಪ್ರಾಮಾಣಿಕ ಕರ್ತವ್ಯ ದಿಂದ ಸದ್ರಿ ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿ ತುರ್ತು ಸ್ಪಂದನಾ ವಾಹನದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೊಂದವರನ್ನು ಹಾಲಾಡಿ ಹೊಳೆಯ ಸೇತುವೆಯ ಮೇಲೆ ಪತ್ತೆಮಾಡಿ ಮಹಿಳೆಯನ್ನು ತಡೆದು ಮಾತಿನಿಂದ ಸಮಾಧಾನಪಡಿಸಿ ಆಗಬಹುದಾದ ತಪ್ಪಿಸಿ ಪ್ರಾಣ ಉಳಿಸಿದ್ದಾರೆ

 

ತದನಂತರ ಅವರ ಪತಿಯನ್ನು ಸ್ಥಳಕ್ಕೆ ಕರೆಸಿ, ಇಬ್ಬರಿಗೂ ಸೂಕ್ತ ಸಮಾಲೋಚನೆ ಮತ್ತು ಬುದ್ಧಿ ಮಾತು ಹೇಳಿ ಹೆಚ್ಚಿನ ಮಾಹಿತಿ ಪಡೆದು ಮನೆಗೆ ಮರಳಿ ಕಳಿಸಿಕೊಡಲಾಗಿದೆ.

 

ಪೊಲೀಸರ ಸಮಯ ಪ್ರಜ್ಞೆ ಹಾಗೂ ಪ್ರಾಮಾಣಿಕ ಕರ್ತವ್ಯ ದಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿ ಅಮೂಲ್ಯ ಪ್ರಾಣ ಉಳಿಸಿ ಕೊಟ್ಟಿರುವ 112 ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.