ಶಿರ್ವ : ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿಯಲ್ಲಿ ನಕಲಿ ಚಿನ್ನಾಭರಣ ಅಡಮಾನ ಇರಿಸಿ ಅಸಲಿ ಎಂದು ನಂಬಿಸಿ ಸಾಲ ಪಡೆದು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿ ಶಾಖೆ ಇವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪುನೀತ್ ಆನಂದ ಕೋಟ್ಯಾನ್, ಸುದೀಪ್, ರಂಜನ್ ಕುಮಾರ್, ಸರ್ವಜೀತ್ ಹೆಚ್, ರಾಜೇಶ್ ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಇರಿಸಿ ಸಾಲ ಪಡೆಯುವರ ಹಾವಳಿ ಹೆಚ್ಚಾಗಿದ್ದ ಹಿನ್ನಲೆ ಯಲ್ಲಿ ಸಾರ್ವಜನಿಕರಿಂದ ದೂರನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ವೃತ್ತ ನಿರೀಕ್ಷಕರು ಕಾಪುರವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರು, ಗೋವಾ, ಮುಂಬೈ ಹಾಗೂ ದೆಹಲಿಯಿಂದ ಆರೋಪಿಗಳಾದ 1.ಪುನೀತ್ ಆನಂದ ಕೋಟ್ಯಾನ್ ತಂದೆ: ಆನಂದ ಸುವರ್ಣ, ಕಪ್ಪೆಟ್ಟು, ಅಂಬಲಪಾಡಿ ಗ್ರಾಮ, ಉಡುಪಿ, 2.ಸುದೀಪ್ ತಂದೆ : ತುಕ್ರ ಪೂಜಾರಿ, ಲಕ್ಮ್ಷೀನಗರ, ತೆಂಕನಿಡಿಯೂರು, ಉಡುಪಿ, 3.ರಂಜನ್ ಕುಮಾರ್ ತಂದೆ : ಸಾಧು ಮೆಂಡನ್, ಏಣಗುಡ್ಡೆ ಕಟಪಾಡಿ, ಕಾಪು ತಾಲೂಕು, 4.ಸರ್ವಜೀತ್ ಹೆಚ್, ಕೆ ತಂದೆ : ಹ್ಯಾನ್‌ಸನ್, ಅಲಂಗಾರು, ಪೆರ್ಡೂರು ಗ್ರಾಮ, ಉಡುಪಿ ಮತ್ತು 5.ರಾಜೇಶ್ ದೀಲೀಪ್ ಪಾಟೇಲ್ ತಂದೆ : ದಿಲೀಪ್ ಪಾಟೀಲ್, ಶ್ರೀನಗರ, ರಹತಾನಿ, ಪುಣೆ, ಮಹಾರಾಷ್ಟ್ರ ಇವರುಗಳನ್ನು ದಸ್ತಗಿರಿ ಮಾಡಿ, ಸೊತ್ತುಗಳನ್ನು ವಶಕ್ಕೆ ಪಡೆದು, ಆಪಾದಿತರಿಂದ ರೂ 4,30,000/- ನಗದು ಹಣ ಹಾಗೂ ನಕಲಿ ಹಾಲ್ ಮಾರ್ಕ್ ಹಾಕಲು ಬಳಸಿದ್ದ ಲೇಸರ್ ಯಂತ್ರ ಹಾಗೂ ಕಂಪ್ಯೂಟರ್‌ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಸದ್ರಿ ಆರೋಪಿಗಳಿಗೆ ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನ ನೀಡಿರುವುದಾಗಿದೆ.
ಸದ್ರಿ ಪ್ರಕರಣದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿಯೂ ಸಹಾ ನಕಲಿ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಇರಿಸಿ ಸಾಲ ಪಡೆದ ಬಗ್ಗೆ ತಿಳಿದು ಬಂದಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿರುತ್ತವೆ.
ಈ ಕಾರ್ಯಾಚರಣೆಯಲ್ಲಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ ಐಪಿಎಸ್ ಮತ್ತು ಕಾಪು ವೃತ್ತ ನಿರೀಕ್ಷಕರಾದ ಅಜ್‌ಮತ್ ಆಲಿ ರವರ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ ಮರಬದ, ಪಿಎಸ್‌ಐ ಲೋಹಿತ್ ಕುಮಾರ್ ಸಿಎಸ್, ಪಡುಬಿದ್ರೆ ಪೊಲೀಸ್ ಠಾಣಾ ಪಿಎಸ್‌ಐ ಅನಿಲ್‌ಕುಮಾರ್ ಟಿ ನಾಯ್ಕ್, ಶ್ರೀಧರ್ ಕೆಜೆ ಎಎಸ್ ಐ ಹಾಗೂ, ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಕಿಶೋರ್, ಮಂಜುನಾಥ, ಅರುಣ್, ಸಿದ್ದರಾಯಪ್ಪ, ನಾಗರಾಜ ಹಾಗೂ ಪಡುಬಿದ್ರೆ ಠಾಣಾ ಸಿಹೆಚ್‌ಸಿ 68 ನಾಗರಾಜ ರವರು ನಡೆಸಿರುತ್ತಾರೆ.








