ಉಡುಪಿ: ಮಕ್ಕಳ ಬೇಸಿಗೆ ರಜೆಯನ್ನು ಸಾರ್ಥಕವಾಗಿ ಕಳೆಯುವ ಉದ್ದೇಶದಿಂದ ಕ್ಯೂಟಿ ಪೈಸ್ ಪ್ಲೇ ಸ್ಕೂಲ್ & ಡೇ ಕೇರ್ ವತಿಯಿಂದ “ಕ್ಯೂಟಿ ಪೈಸ್ ಬೇಸಿಗೆ ಶಿಬಿರ – 2026” ಆಯೋಜಿಸಲಾಗಿದೆ.
ಮಕ್ಕಳಲ್ಲಿ ಸೃಜನಶೀಲತೆ, ಕಲಿಕೆ ಮತ್ತು ಕೌಶಲ್ಯ ವೃದ್ಧಿಗೆ ಸಹಾಯಕವಾಗುವ ವಿವಿಧ ಚಟುವಟಿಕೆಗಳನ್ನು ಈ ಸಮರ್ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಮಕ್ಕಳಿಗಾಗಿ ಹಲವು ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರಕಲೆ, ಯೋಗ, ನೃತ್ಯ, ಮಣ್ಣಿನ ಕಲಾಕೃತಿ ರಚನೆ, ಮೆಹೆಂದಿ ಬಿಡಿಸುವುದು,ಬೆಂಕಿ ಇಲ್ಲದೆ ಅಡುಗೆ ಮಾಡುವುದು ವಿವಿಧ ರೀತಿಯ ಪೈಂಟಿಂಗ್‌ಗಳು, ಕರಕುಶಲ ವಸ್ತುಗಳ ತಯಾರಿ, ಬೇಕಿಂಗ್ ಸೇರಿದಂತೆ ಹಲವು ಚಟುವಟಿಕೆಗಳು ನಡೆಯಲಿವೆ.
ಜೊತೆಗೆ ಮುಖ ಚಿತ್ರಕಲೆ (Face Painting) ಹಾಗೂ ಭಜನೆ/ಕುಣಿತ ಭಜನೆ ಕಾರ್ಯಕ್ರಮಗಳನ್ನೂ ಮಕ್ಕಳಿಗೆ ಪರಿಚಯಿಸಲಾಗುತ್ತದೆ.
ಬೇಸಿಗೆ ರಜೆಯನ್ನು ಮನರಂಜನೆಯೊಂದಿಗೆ ಉಪಯುಕ್ತವಾಗಿ ಕಳೆಯಲು ಇದು ಉತ್ತಮ ಅವಕಾಶವಾಗಿದ್ದು, ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಈ ಶಿಬಿರದಲ್ಲಿ ಭಾಗವಹಿಸಲು ನೋಂದಾಯಿಸಬಹುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:📞 9740221121, 6360968712






