Home Dskshina Kannada ಅಕ್ರಮ ಗೋಹತ್ಯಾ ಪ್ರಕರಣ: ಕೃತ್ಯ ನಡೆದ ಸ್ಥಳದ ಜಪ್ತಿ

ಅಕ್ರಮ ಗೋಹತ್ಯಾ ಪ್ರಕರಣ: ಕೃತ್ಯ ನಡೆದ ಸ್ಥಳದ ಜಪ್ತಿ

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಕ್ರಮ ಗೋಹತ್ಯಾ ಪ್ರಕರಣದ ಅಪರಾಧ ಸಂಖ್ಯೆ: 68/2026ರಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆಯಡಿಯಲ್ಲಿ ಅಕ್ರಮ ಗೋಹತ್ಯೆಯ ಕೃತ್ಯ ನಡೆದ ಸ್ಥಳವದ ಬಂಟ್ವಾಳ, ಸಜೀಪ ಮೂಡಾ ಗ್ರಾಮದ ಕೊಳಕೆ ಪಂಜಾಜೆ ಎಂಬಲ್ಲಿರುವ ಆರೋಪಿ ಮುಸ್ತಫಾ ಎಂಬವರ ಮನೆ ಹಾಗೂ ದನದ ಕೊಟ್ಟಿಗೆಗಳನ್ನು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020’ ರಂತೆ ಪೊಲೀಸರು ಜಪ್ತಿ ಮಾಡಿ, ಮುಂದಿನ ಕ್ರಮಕ್ಕಾಗಿ ಮಾನ್ಯ ಉಪ ವಿಭಾಗೀಯ ದಂಡಾಧಿಕಾರಿಗಳು, ಮಂಗಳೂರು ಉಪವಿಭಾಗಧಿಕಾರಿ ಅವರಿಗೆ ಪೊಲೀಸರು ವರದಿಯನ್ನು ಸಲ್ಲಿಸಿರುತ್ತಾರೆ.